ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ (Ration Shop) ಕೆಲ ಕಡೆಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಿರಬಹುದು. ಸರಬರಾಜು ಸಮಸ್ಯೆ ಆಗಿರಬಹುದು ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಸ್ಪಷ್ಟಪಡಿಸಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಅಕ್ಕಿಯನ್ನು ಈ ತಿಂಗಳ ಅಂತ್ಯದ ತನಕವೂ ಕೊಡಬೇಕು. ಅಕ್ಕಿ ಇದೆ, ಯಾವುದೇ ಕೊರತೆ ಇಲ್ಲ. ಸಾಗಾಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಅಕ್ಕಿ ಖರೀದಿ ಮಾಡಿದ್ದೇವೆ, ದಾಸ್ತಾನಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರೋ ಬೋಧಕ ಹುದ್ದೆ ಹಂತ ಹಂತವಾಗಿ ಭರ್ತಿ: ಡಾ.ಸುಧಾಕರ್
ಸಮಸ್ಯೆ ಆಗಿರುವ ಕಡೆ ಪರಿಹರಿಸುತ್ತೇವೆ. ಎರಡು ತಿಂಗಳ ಅಕ್ಕಿ ಒಂದೇ ತಿಂಗಳು ಕೊಡಬೇಕಾಗಿರುವುದರಿಂದ ಕೆಲವು ಕಡೆ ಸಮಸ್ಯೆ ಆಗಿರಬಹುದು. ಇನ್ನು ಅಕ್ಕಿ ತೆಗೆದುಕೊಂಡು ಮಾರಿದರೆ ಕಾರ್ಡ್ ರದ್ದು ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಚಾರಣೆ ಮಾಡುತ್ತೇವೆ. ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ, ಮಾಹಿತಿ ತೆಗೆದುಕೊಂಡು ಮಾನಾಡುತ್ತೇನೆ ಎಂದರು. ಇದನ್ನೂ ಓದಿ: ವಿಜಯಪುರ| ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ – ಮೂವರು ಸಾವು