ಲಕ್ನೋ: ರಾಜ್ಯದ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ನನಗೆ ಯಾವುದೇ ವಿಶೇಷ ವ್ಯವಸ್ಥೆಗಳನ್ನು ಮಾಡಬೇಡಿ ಅಂತಾ ಉತ್ತರಪ್ರದೆಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ್ದಾರೆ.
ರಾಜ್ಯದ ಜನತೆಯನ್ನು ಗೌರವಿಸಿದ್ರೆ ಸಾಕು. ಅದೇ ಮುಖ್ಯಮಮಂತ್ರಿಗೆ ಗೌರವ ಸೂಚಿಸಿದಂತಾಗುತ್ತದೆ. ಹೀಗಾಗಿ ಪರಿಶೀಲನೆ ಅಥವಾ ರಾಜ್ಯ ಪ್ರವಾಸಕ್ಕೆ ತೆರಳುವ ವೇಳೆ ಯಾವುದೇ ವಿಶೇಷ ಆಯೋಜನೆಗಳನ್ನು ಮಾಡಬೇಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
Advertisement
ಇತ್ತೀಚೆಗಷ್ಟೇ ಹುತಾತ್ಮ ಬಿಎಸ್‍ಎಫ್ ಯೋಧರೊಬ್ಬರ ಮನೆಗೆ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದರು. ಈ ವೇಳೆ ಅವರ ಮನೆಯಲ್ಲಿ ಸೋಫಾ, ಎಸಿ, ಕಾರ್ಪೆಟ್ ಗಳನ್ನು ತಂದು ಅಧಿಕಾರಿಗಳು ಹಾಕಿದ್ದರು. ಸಿಎಂ ಮನೆಯಿಂದ ತೆರಳಿದ ತಕ್ಷಣವೇ ಅವುಗಳನ್ನು ಅಲ್ಲಿಂದ ತೆರವುಗೊಳಿಸಿದ್ದರು. ಅಲ್ಲದೇ ಸಿಎಂ ಭೇಟಿ ನೀಡುವ ಹಿನ್ನೆಲೆಯಲ್ಲಿ ಕುಶಿನಗರ ಜಿಲ್ಲಾಡಳಿತ ಅಲ್ಲಿನ ಬುಡಕಟ್ಟು ಜನಾಂದ ಮಂದಿಗೆ ಸೋಪು-ಶಾಂಪು ನೀಡಿ ಸ್ನಾನ ಮಾಡಿಕೊಂಡು ಶುಚಿಯಾಗಿ ಬರುವಂತೆ ಸೂಚಿಸಲಾಗಿತ್ತು. ಈ ಎಲ್ಲಾ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸಿಎಂ ಗಮನಕ್ಕೆ ಬಂದಿದೆ. ವರದಿಗಳನ್ನು ನೋಡಿದ ಯೋಗಿ ಆದಿತ್ಯನಾಥ್ ವಿಶೇಷ ಸಿದ್ಧತೆಗಳನ್ನು ಮಾಡದಂತೆ ಆದೇಶಿಸಿದ್ದಾರೆ.