ಮೈಸೂರ: ಲೋಕಸಭೆಯ ಕಲಾಪದ ನಡೆಯುವಾಗಲೇ ಸ್ಮೋಕ್ ಬಾಂಬ್ (Smoke Bomb) ಎಸೆದಿದ್ದ ಮನೋರಂಜನ್ (Manoranjan) ಮೈಸೂರು (Mysuru) ಮೂಲದವನಾಗಿದ್ದರೂ ಹಲವು ವರ್ಷಗಳಿಂದ ಮೈಸೂರಿನಲ್ಲಿ ತನ್ನ ಸ್ನೇಹಿತರ ಸಂಪರ್ಕವನ್ನೇ ಕಳೆದುಕೊಂಡಿದ್ದ ಎಂಬುದು ಬೆಳಕಿಗೆ ಬಂದಿದೆ.
ಮನೋರಂಜನ್ ಮೈಸೂರಿನ ಎಲ್ಲಾ ಸ್ನೇಹಿತರ ಸಂಪರ್ಕ ಕಳೆದುಕೊಂಡಿದ್ದ. ಬೆಂಗಳೂರಿನಲ್ಲೇ (Bengaluru) ತನ್ನ ಸ್ನೇಹಿತರ ನೆಟ್‌ವರ್ಕ್ ಇಟ್ಟುಕೊಂಡಿದ್ದ. ಮೈಸೂರಿನಲ್ಲಿ ಕಳೆದ 5-6 ವರ್ಷಗಳಿಂದ ಯಾವುದೇ ಸ್ನೇಹಿತರ ಸಂಪರ್ಕದಲ್ಲಿ ಇರಲಿಲ್ಲ. ಈ ಹಿನ್ನೆಲೆ ಪೊಲೀಸರು ಬೆಂಗಳೂರಿನಲ್ಲಿ ಅವನ ವಾಸಸ್ಥಳದ ಪರಿಶೀಲನೆಗೆ ತೆರಳಿದ್ದಾರೆ. ಜೊತೆಗೆ ಮನೋರಂಜನ್‌ನ ಬೆಂಗಳೂರಿನಲ್ಲಿರುವ ಸ್ನೇಹಿತರ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್!
ಇಷ್ಟು ಮಾತ್ರವಲ್ಲದೇ ಮನೋರಂಜನ್ ಹೆಸರಿನಲ್ಲಿ ಯಾವುದೇ ಅಧಿಕೃತವಾಧ ಸೋಷಿಯಲ್ ಮೀಡಿಯಾ ಖಾತೆ ಇಲ್ಲ ಎಂಬುದು ತಿಳಿದು ಬಂದಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇರದ ಮನೋರಂಜನ್‌ಗೆ ಉತ್ತರ ಭಾರತದವರ ಪರಿಚಯ ಹೇಗಾಯಿತು ಎಂಬುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಆದರೆ ಆತ ನಕಲಿ ಅಕೌಂಟ್ ಹೊಂದಿರುವ ಸಾಧ್ಯತೆ ಇದ್ದು, ವ್ಯವಸ್ಥಿತ ಪ್ಲ್ಯಾನ್ ಮಾಡಿಯೇ ಸಂಸತ್ ಭವನಕ್ಕೆ ನುಗ್ಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?