ತಿರುವನಂತಪುರಂ: ಶಾಲಾ ಶಿಕ್ಷಕರನ್ನು ಇನ್ಮುಂದೆ ʼಸರ್ʼ (Sir), ʼಮೇಡಂʼ (Madam) ಎಂದು ಕರೆಯುವಂತಿಲ್ಲ. ಅವರನ್ನು ʼಟೀಚರ್ʼ (Teacher) ಅಂತಾ ಕರೆಯಬೇಕು ಎಂದು ಮಕ್ಕಳಿಗೆ ಸೂಚಿಸಬೇಕು ಎಂದು ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ (Kerala) ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ನಿರ್ದೇಶಿಸಿದೆ.
ʼಸರ್ʼ, ʼಮೇಡಂʼ ಎನ್ನುವುದಕ್ಕಿಂತ ʼಟೀಚರ್ʼ ಅನ್ನುವ ಪದ ʼಲಿಂಗ ತಟಸ್ಥʼವಾಗಿರುವುದರಿಂದ ಹೀಗೆಯೇ ಕರೆಯಬೇಕು ಎಂದು ತಿಳಿಸಿದೆ. ಶಿಕ್ಷಕರು ಕೂಡ ಈ ಪದ ಬಳಸುವುದನ್ನು ಕಡಿಮೆ ಮಾಡಬೇಕು ಎಂದು ಕೆಎಸ್ಸಿಪಿಸಿಆರ್ ಸೂಚಿಸಿದೆ. ಇದನ್ನೂ ಓದಿ: ವಿಶ್ವದ ಅತೀ ಉದ್ದದ ನದಿ ವಿಹಾರ ನೌಕೆ `ಎಂವಿ ಗಂಗಾ ವಿಲಾಸ್’ ಕ್ರೂಸ್ಗೆ ಮೋದಿ ಅದ್ಧೂರಿ ಚಾಲನೆ
Advertisement
Advertisement
ಸಮಿತಿಯ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಮತ್ತು ಸದಸ್ಯ ಸಿ.ವಿಜಯಕುಮಾರ್ ಅವರನ್ನೊಳಗೊಂಡ ಪೀಠ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಟೀಚರ್’ ಪದವನ್ನು ಬಳಸಲು ಸೂಚನೆಗಳನ್ನು ನೀಡುವಂತೆ ಸಾಮಾನ್ಯ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.
Advertisement
ಸರ್ ಅಥವಾ ಮೇಡಂ ಎಂದು ಕರೆಯುವ ಬದಲು ಟೀಚರ್ ಎಂದು ಕರೆದರೆ ಎಲ್ಲ ಶಾಲೆಗಳ ಮಕ್ಕಳಲ್ಲಿ ಸಮಾನತೆ ಕಾಪಾಡಲು ಸಹಕಾರಿಯಾಗುತ್ತದೆ. ಶಿಕ್ಷಕರೊಂದಿಗೆ ಅವರ ಬಾಂಧವ್ಯ ಹೆಚ್ಚುತ್ತದೆ ಎಂದು ಮಕ್ಕಳ ಹಕ್ಕು ಆಯೋಗ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: BJP ನೀತಿಗಳಿಂದ ಭಾರತದಲ್ಲೂ ತಾಲಿಬಾನ್ನಂಥ ಭಯಾನಕ ಪರಿಸ್ಥಿತಿ ಎದುರಾಗುತ್ತೆ: KCR
Advertisement
ಶಿಕ್ಷಕರನ್ನು ಅವರ ಲಿಂಗಕ್ಕೆ ಅನುಗುಣವಾಗಿ ‘ಸರ್’ ಮತ್ತು ‘ಮೇಡಂ’ ಎಂದು ಸಂಬೋಧಿಸುವುದು ತಾರತಮ್ಯ ಸೂಚಿಸುತ್ತದೆ. ಅದನ್ನು ತಪ್ಪಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಈ ನಿರ್ದೇಶನ ನೀಡಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k