ಆಂಸ್ಟರ್ಡ್ಯಾಮ್: ದಯವಿಟ್ಟು ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ ಎಂದು ನೆದರ್ಲೆಂಡ್‌ನ (Netherland) ಆಂಸ್ಟರ್ಡ್ಯಾಮ್ ಪಟ್ಟಣ ಪ್ರವಾಸಿಗರಿಗೆ (Tourists) ಮನವಿ ಮಾಡಿದೆ. ಇದೇ ಮೊದಲಬಾರಿಗೆ ನೆದರ್ ಲ್ಯಾಂಡ್‌ನ ನಗರವೊಂದು ಬೀಚ್ ಮತ್ತು ದಿಬ್ಬಗಳಲ್ಲಿ ಸೆಕ್ಸ್ ಮಾಡುವುದನ್ನು ನಿಷೇಧಿಸಿದೆ. ದಕ್ಷಿಣ ನೆದರ್‌ಲ್ಯಾಂಡ್‌ನ ವೀರೆ ಎಂಬ ಪಟ್ಟಣವು No Sex On The Beach (ಬೀಚ್‌ನಲ್ಲಿ ಸೆಕ್ಸ್ ಬೇಡ) ಎಂಬ ಅಭಿಯಾನ ಕೈಗೊಂಡಿದೆ.
ವೀರೆ ಮುನ್ಸಿಪಾಲಿಟಿಯು (Veere Municipality) ಬೀಚ್‌ನಲ್ಲಿ ಸೆಕ್ಸ್ ನಿಷೇಧದ ಫಲಕಗಳನ್ನ ಅಳವಡಿಸುವ ಮೂಲಕ ಪ್ರವಾಸಿಗರಿಗೂ ತಿಳಿಸಲಾಗುತ್ತಿದೆ. ವಿಶೇಷವಾಗಿ ಮರಳಿನ ದಿಬ್ಬಗಳಲ್ಲಿ ರತಿಕ್ರೀಡೆಗೆ ಅವಕಾಶವಿಲ್ಲ. ಅವುಗಳನ್ನ ಕಾನೂನುಬದ್ಧಗೊಳಿಸಲಾಗಿದೆ. ಮೀಸಲು ಅರಣ್ಯ ಮತ್ತು ಬೀಚ್‌ಗಳಲ್ಲಿ ಸೆಕ್ಸ್ ಮಾಡೋದನ್ನ ತಪ್ಪಿಸಲು ಮೇಲ್ವಿಚಾರಣೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
ಗುರುವಾರ ವೀರೆ ಮುನ್ಸಿಪಾಲಿಟಿ (Netherland Veere Municipality) ಈ ನಿರ್ಣಯ ಕೈಗೊಂಡಿದ್ದು, ಕಡಲ ತೀರಗಳು, ನೈಸರ್ಗಿಕ ಪ್ರದೇಶಗಳು ಹಾಗೂ ಮರಳಿನ ದಿಬ್ಬಗಳಲ್ಲಿ ಸಾರ್ವಜನಿಕ ಲೈಂಗಿಕತೆಯನ್ನ ನಿಷೇಧಿಸಿದೆ. ಇದನ್ನೂ ಓದಿ: ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ
Advertisement
ಈ ಕುರಿತು ಪ್ರಕಟಣೆ ನೀಡಿರುವ ವೀರೆ ಪಟ್ಟಣದ ಮೇಯರ್ ಫ್ರೆಡೆರಿಕ್ ಶೌವೆನಾರ್, ಸ್ಥಳೀಯ ಸಮುದಾಯಕ್ಕೆ ಈ ಮರಳಿನ ದಿಬ್ಬಗಳು ತುಂಬ ಮಹತ್ವದ್ದಾಗಿವೆ. ಹಾಗಾಗಿ ನೈಸರ್ಗಿಕ ಪರಿಸರ ಹಾನಿಗೊಳಿಸುವಂತಹ ಅನಪೇಕ್ಷಿತ ನಡವಳಿಕೆಯಿಂದ ರಕ್ಷಿಸಬೇಕಾದ ಅಗತ್ಯವಿದೆ. ಪ್ರವಾಸಿಗರ ಸೆಕ್ಸ್ ಚಟುವಟಿಕೆಯು ರಜೆ ಆಸ್ವಾದಿಸಲು ಬರುವ ಇತರರಿಗೂ ತೊಂದರೆಯಾಗಬಹುದು. ಈ ನಿರ್ಧಾರವು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರ ಇನ್ನುಮುಂದೆ ಎಚ್ಚರಿಕೆಗಳನ್ನು ನೀಡುವುದಿಲ್ಲ ಬದಲಿಗೆ, ತ್ವರಿತ ಮೌಖಿಕವಾಗಿ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಎಂಟು ಹೊಸ ಮಾಹಿತಿ ಫಲಕಗಳನ್ನು ಸ್ಥಾಪಿಸಲಾಗಿದೆ. ಈ ಮಧ್ಯೆ ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಆಕ್ಷೇಪ ಕೂಡ ವ್ಯಕ್ತವಾಗಿದೆ. ಲೈಂಗಿಕ ನಡವಳಿಕೆಯಿಂದ ಬೆತ್ತಲೆ ಸೂರ್ಯ ಸ್ನಾನ ಪ್ರಕ್ರಿಯೆಯನ್ನು ಪ್ರತ್ಯೇಕಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಬೆತ್ತಲೆ ಸೂರ್ಯ ಸ್ನಾನವು ಲೈಂಗಿಕತೆಯಲ್ಲ ಅದು ಸ್ವಾತಂತ್ರ್ಯದ ಭಾವನೆಯನ್ನು ನೀಡುತ್ತದೆ, ಫೋಟೋಶಾಪ್ ಮಾಡದ ನೈಜ, ಬೆತ್ತಲೆ ದೇಹಗಳನ್ನು ನೋಡುವುದು ತುಂಬಾ ಆರೋಗ್ಯಕರ. ಆದರೆ ನಾವು ಹೊರಾಂಗಣದಲ್ಲಿ ಲೈಂಗಿಕತೆಯಿಂದ ದೂರವಿರುತ್ತೇವೆ ಎಂದು ಸಂಘಟನೆಯೊಂದು ತಿಳಿಸಿದೆ.