ದಾವಣಗೆರೆ: ಗೋ ಭಕ್ಷಣೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದ್ರೆ ನಮ್ಮ ಕೆಲ ರಾಜಕಾರಣಿಗಳ ಸಂವಿಧಾನದಲ್ಲಿ ಅಧಿಕಾರವಿದೆ ಎಂದು ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ. ಅವರಿಗೆ ಕಾನೂನು ಮತ್ತು ಸಂವಿಧಾನದ ಜ್ಞಾನ ಇಲ್ಲ ಎಂದು ರಾಜ್ಯಪಾಲ ವಜುಭಾಯ್ ವಾಲಾ ಆಕ್ರೋಶ ವ್ಯಕ್ತಪಡಿಸಿದ್ರು.
ಅಧಿವಕ್ತಾ ಪರಿಷತ್ ಬೆಳ್ಳಿ ಮಹೋತ್ಸವ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಿದ್ದ ವಕೀಲರ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಗೋ ಸಾಕಣೆಗೆ ಅವಕಾಶ ಇದೆಯೇ ಹೊರತು ಭಕ್ಷಣೆಗಲ್ಲ. ಸಂವಿಧಾನದ 48 (ಎ) ವಿಧಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಮ್ಮ ಆಹಾರ ಪದ್ಧತಿ, ಸಂವಿಧಾನದಲ್ಲಿ ಅಧಿಕಾರ ಇದೆ ಎನ್ನುವವರಿಗೆ ನಿಮಗೆ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್ ಚಾಟೀ ಬೀಸಿದೆ.
Advertisement
Advertisement
ರಾಜಕಾರಣಿಗಳು ಮೊದಲು ಸಂವಿಧಾನ ಮತ್ತು ಕಾನೂನಿನ ಜ್ಞಾನ ಬೆಳೆಸಿಕೊಳ್ಳಬೇಕು. ಭಾರತ ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಗೆ ಆದ್ಯತೆ ನೀಡಬೇಕು. ಅಲ್ಪಸಂಖ್ಯಾತರಿಗೊಂದು ಮತ್ತೊಬ್ಬರಿಗೊಂದು ಕಾನೂನು ಇರುವುದು ಸೂಕ್ತವಲ್ಲ ಎಂದು ಸಲಹೆ ನೀಡಿದ್ರು.
Advertisement
ರಾಷ್ಟ್ರೀಯ ಚಿಂತನೆ ಮಾಡಲು ವಕೀಲರೆಲ್ಲ ಒಂದಾಗಿರೋದು ಸಂತೋಷದ ವಿಷಯ. ಎಲ್ಲ ರಾಜಕಾರಣಿಗಳಿಗೂ ಹೇಳ್ತಿನಿ ಮೊದಲು ಸಂವಿಧಾನ ಪಾಲಿಸಿ. ನಾವು ಎಲ್ರಿಗೂ ನ್ಯಾಯ ಒದಗಿಸಬೇಕಿದೆ, ನ್ಯಾಯವೇ ವಕೀಲರ ಧರ್ಮ ಆಗಬೇಕು ಅಂದ್ರು.
Advertisement
ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ವಿನಾಯಕ ದೀಕ್ಷಿತ್, ಪರಿಷತ್ ಕರ್ನಾಟಕ ಅಧ್ಯಕ್ಷ ಎ.ಎಂ.ಸೂರ್ಯಪ್ರಕಾಶ್ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.