ಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯ ಆಗುವಂತೆ ಒಂದನೇ ತರಗತಿಗೆ ಮಾತ್ರ ದಾಖಲಾತಿ ವಯಸ್ಸಿನ ಮಿತಿ (Age Limit) ಸಡಿಲ ಮಾಡಲಾಗಿದೆ. ಎಲ್‌ಕೆಜಿ-ಯುಕೆಜಿಗೆ ವಯಸ್ಸಿನ ಮಿತಿ ಸಡಿಲ ಇಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಆದೇಶ ಹೊರಡಿಸಿದೆ.
ಇತ್ತೀಚಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಒಂದನೇ ತರಗತಿ ದಾಖಲಾತಿ ಮಿತಿಯನ್ನು 5 ವರ್ಷ 5 ತಿಂಗಳಿಗೆ ಕಡಿತ ಮಾಡಿ ಆದೇಶ ಮಾಡಿದ್ದರು. ಈ ಆದೇಶ ಎಲ್‌ಕೆಜಿ-ಯುಕೆಜಿ (LKG-UKG) ಮಕ್ಕಳ ದಾಖಲಾತಿಗೆ ಗೊಂದಲ ಉಂಟು ಮಾಡಿಸಿತ್ತು. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಿಕ್ಷಣ ಇಲಾಖೆ (Education Department), ವಯಸ್ಸಿನ ಮಿತಿ ಸಡಿಲ ಒಂದನೇ ತರಗತಿಗೆ ಈ ವರ್ಷಕ್ಕೆ ಮಾತ್ರ ಅನ್ವಯ. 2025-26ನೇ ಸಾಲಿಗೆ ಎಲ್‌ಕೆಜಿ-ಯುಕೆಜಿಗೆ ದಾಖಲಾತಿ ಆಗುವ ಮಕ್ಕಳಿಗೆ ಈ ನಿಯಮ ಅನ್ವಯ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನೂ ಓದಿ: ದ್ವೇಷರಹಿತ ಸಮಾಜಕ್ಕೆ ಬಸವಣ್ಣ ಸಂದೇಶ ಅಗತ್ಯ: ದಕ್ಷಿಣ ಕನ್ನಡ ಜಿಪಂ ಸಿಇಒ
ಎಲ್‌ಕೆಜಿಗೆ ದಾಖಲಾಗಲು 4 ವರ್ಷ, ಯುಕೆಜಿಗೆ ದಾಖಲಾಗಲು 5 ವರ್ಷ ಕಡ್ಡಾಯವಾಗಿ ತುಂಬಿರಬೇಕು ಎಂದು ಆದೇಶ ಹೊರಡಿಸಿದೆ. ಸರ್ಕಾರದ ಆದೇಶವನ್ನು ಎಲ್ಲಾ ಜಿಲ್ಲೆಯ ಡಿಡಿಪಿಐಗಳು, ಬಿಇಒಗಳು ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಜಲಯುದ್ಧ – ಚೆನಾಬ್ ನದಿಯ ನೀರಿನ ಮಟ್ಟ ಭಾರೀ ಇಳಿಕೆ