ಬೆಂಗಳೂರು: ಕಾಂಗ್ರೆಸ್ (Congress) ಬಿಟ್ಟು ಬಂದಿದ್ದಕ್ಕೆ ನನಗೆ ಪಶ್ಚಾತ್ತಾಪ ಇಲ್ಲ. ಮರಳಿ ವಾಪಸ್ ಕಾಂಗ್ರೆಸ್ಸಿಗೆ ಹೋಗುವುದಿಲ್ಲ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಬಂದಿದ್ದಕ್ಕೆ ನನಗೇನು ಬೇಸರ ಇಲ್ಲ ಪಶ್ಚಾತ್ತಾಪ ಇಲ್ಲ. ಕಾಂಗ್ರೆಸ್ಸಿಗೆ ನಾನು ಮರಳಿ ಹೋಗುವುದಿಲ್ಲ. ನನಗೆ ಸ್ಥಾನ ದೊಡ್ಡದಲ್ಲ ಮಾನ ದೊಡ್ಡದು. ಮಾನ ಇಲ್ಲದ ಅಧಿಕಾರ, ಗೌರವ ಇಲ್ಲದ ಸ್ಥಾನ ನನಗೆ ಬೇಕಾಗಿಲ್ಲ. ಒಂದು ಸಿದ್ದಾಂತದ ಮೇಲೆ ನಾನು ರಾಜೀನಾಮೆ ಕೊಟ್ಟೆ. ರಾಜೀನಾಮೆ ಕೊಟ್ಟಿರುವ ಬಗ್ಗೆ ನನಗೆ ಕಿಂಚಿತ್ ಪಶ್ಚಾತ್ತಾಪ ಇಲ್ಲ ಎಂದರು. ಇದನ್ನೂ ಓದಿ: ವಂದೇ ಭಾರತ್ ರೈಲಿನ ಒಳಗಡೆ ಲಗ್ಗೆ ಇಡಲು ನಂದಿನಿ ತಯಾರಿ!
Advertisement
ಈಗಲೂ ನಾನು ಕ್ರೀಡಾಪಟು ಇದ್ದ ಹಾಗೇ ಇದ್ದೇನೆ. ನಾನು ಸ್ಥಾನಕ್ಕೆ ಆಸೆ ಪಟ್ಟಿದ್ದರೆ ವಾಜಪೇಯಿ ಕಾಲದಲ್ಲಿ ಮಂತ್ರಿ ಆಗಬಹುದಿತ್ತು. ಆದರೆ ನನಗೆ ಸೈದ್ದಾಂತಿಕವಾಗಿ ನಮ್ಮ ವಿರೋಧ ಎಂದರು. ವ್ಯಕ್ತಿಗತವಾಗಿ ಮೋದಿಯನ್ನ ನಾನು ಇಷ್ಟ ಪಡ್ತೀನಿ. I Like Him. I Love Him.ಆದರೆ ಸೈದ್ಧಾಂತಿಕವಾಗಿ ನಾನು ಅವರನ್ನ ವಿರೋಧ ಮಾಡುತ್ತೇನೆ. ನಮಗೆ ಸಿಗಬೇಕಾದ ಸಲವತ್ತು ಸಿಕ್ಕಿಲ್ಲ. ಅದನ್ನು ಕೇಳಿದರೆ ಜಾತಿವಾದಿ ಎನ್ನುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
Advertisement
Web Stories