ನವದೆಹಲಿ: ಸೆಪ್ಟೆಂಬರ್ 29, 2016ಕ್ಕೂ ಮೊದಲು ಸರ್ಜಿಕಲ್ ದಾಳಿ ನಡೆದ ಬಗ್ಗೆ ದಾಖಲೆಗಳಿಲ್ಲ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶನಾಲಯ (ಡಿಜಿಎಂಒ) ತಿಳಿಸಿದೆ.
2016ರ ಸೆಪ್ಟೆಂಬರ್‍ನಲ್ಲಿ ನಡೆದ ದಾಳಿಗೂ ಮುನ್ನ ಈ ಹಿಂದೆ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿತ್ತಾ ಎನ್ನುವ ಪ್ರಶ್ನೆಯನ್ನು ಮಾಹಿತಿ ಹಕ್ಕಿನ ಅಡಿ ಕೇಳಲಾಗಿತ್ತು. ಈ ಪ್ರಶ್ನೆಗೆ ಡಿಜಿಎಂಒ ಈ ಹಿಂದೆ ಸರ್ಜಿಕಲ್ ಸ್ಟೈಕ್ ರೀತಿಯ ದಾಳಿ ನಡೆದ ಬಗ್ಗೆ ನಮ್ಮಲ್ಲಿ ಯಾವುದೇ ದಾಖಲೆಗಳು ಇಲ್ಲ ಎಂದು ಉತ್ತರಿಸಿದೆ.
Advertisement
2004ರಿಂದ 2014ರಂದು ಸೇನೆಯು ಯಾವುದಾದರೂ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರೆ ಅದರ ಮಾಹಿತಿ ತಿಳಿಸಿ. ಅಷ್ಟೇ ಅಲ್ಲದೇ ನಿಮ್ಮ ಪ್ರಕಾರ ಸರ್ಜಿಕಲ್ ಸ್ಟ್ರೈಕ್ ಎಂದರೆ ಏನು ಅದರ ವ್ಯಾಖ್ಯೆಯನ್ನು ತಿಳಿಸಿ ಎಂದು ಪ್ರಶ್ನೆ ಕೇಳಲಾಗಿತ್ತು.
Advertisement
ಈ ಪ್ರಶ್ನೆಗೆ, ಓಪನ್ ಸೋರ್ಸ್ ಪ್ರಕಾರ ಪೂರ್ವಭಾವಿ ಸಿದ್ಧತೆಯೊಂದಿಗೆ ಒಂದು ಶತ್ರು ನೆಲೆಗೆ ನುಗ್ಗಿ ಹೆಚ್ಚು ಹಾನಿಯಾಗದಂತೆ ನಿರ್ಧಿಷ್ಟ ಪ್ರದೇಶದಲ್ಲಿ ದಾಳಿ ನಡೆಸಿ ಸುರಕ್ಷಿತವಾಗಿ ಸೇನೆ ಹಿಂದಿರುಗಿ ಬರುವುದು ಎಂದು ಉತ್ತರಿಸಿದೆ.
Advertisement
ಸಪ್ಟೆಂಬರ್ 28, 29ರ ಮಧ್ಯರಾತ್ರಿ ವೇಳೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿ 20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಡಿಜಿಎಂಒ ಅಧಿಕಾರಿ ಕಾರ್ಯಾಚರಣೆಯ ವಿವರವನ್ನು ನೀಡಿದ್ದರು.
Advertisement