ರಾಯಚೂರು: ರಾಜ್ಯದ ಹಲವೆಡೆ ವರುಣ ದೇವ ಕೃಪೆತೋರಿ ರೈತರ ಕೈ ಹಿಡಿಯುತ್ತಿದ್ದರೆ ರಾಯಚೂರು (No Rain Raichur) ಜಿಲ್ಲೆಯಲ್ಲಿ ಮಾತ್ರ ಮಳೆ ಮಾಯವಾಗಿದೆ. ಮಳೆ ಕೊರತೆಯಿಂದ ನಷ್ಟಕ್ಕೆ ಹೆದರಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯನ್ನ ರೈತರೇ ಸ್ವತಃ ಕಿತ್ತಿಹಾಕುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಬರಗಾಲ ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ತಡವಾಗಿಯಾದರೂ ಮಳೆ ಸುರಿಯುತ್ತಿದ್ದರೆ ರಾಯಚೂರು ಜಿಲ್ಲೆಯಲ್ಲಿ ಮಳೆರಾಯನ ದರ್ಶನವೇ ಆಗುತ್ತಿಲ್ಲ. ಹತ್ತಿ ಬಿತ್ತನೆಯಾಗಿ ಒಂದು ತಿಂಗಳು ಕಳೆದಿದ್ದು ನೀರಿಲ್ಲದೆ ಬೆಳೆ ಹಾಳಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಹತ್ತಿ ಬೆಳೆದ ರೈತರು ತಮ್ಮ ಜಮೀನಿಗೆ ತಾವೇ ಸ್ವತಃ ಜಾನುವಾರುಗಳನ್ನ ಬಿಟ್ಟು ಹತ್ತಿ ಬೆಳೆಯನ್ನೇ ಮೇಯಿಸುತ್ತಿದ್ದಾರೆ.
Advertisement
Advertisement
ಹತ್ತಿ ಬೆಳೆ ನೀರಿಲ್ಲದೆ ಕೆಂಪಾಗುತ್ತಿದ್ದು ಫಸಲು ಬರುವ ಯಾವುದೇ ಲಕ್ಷಣಗಳಿಲ್ಲ. ಹೀಗಾಗಿ ಕೆಲ ರೈತರು ಜಾನುವಾರುಗಳಿಗಾದರೂ ಮೇವಾಗಲಿ ಅಂತ ಮೇಯಲು ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆಬಾರದೆ ಇದ್ದರೆ ಸರ್ಕಾರ ಬರಗಾಲ ಘೋಷಣೆ ಮಾಡಬೇಕು ಅಂತ ರೈತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉತ್ತರಕನ್ನಡದಲ್ಲಿ ಮಳೆಯಬ್ಬರಕ್ಕೆ ನಡೆದುಕೊಂಡು ಹೋಗ್ತಿದ್ದ ಇಬ್ಬರು ನೀರುಪಾಲು
Advertisement
ರಾಯಚೂರು (Raichur) ಜಿಲ್ಲೆಯ ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಮಳೆಗಾಗಿ ರೈತರು ಊರಿನ ದೇವರುಗಳಿಗೆ ಜಲಾಭಿಷೇಕ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಬರಗಾಲ ಛಾಯೆ ಆವರಿಸಿರುವ ಹಿನ್ನೆಲೆ ಪೂಜೆ ಸಲ್ಲಿಸುತ್ತಿದ್ದಾರೆ.
Advertisement
ಅತ್ತ ಯಾದಗಿರಿ (Yadagiri) ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ತಿಂಥಿಣಿ ಗ್ರಾಮದ ಯುವಕರು ಮೌನೇಶ್ವರ ದೇವರಿಗೆ ಜಲಾಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಮೆರವಣಿಗೆ ಮಾಡಿದ್ದಾರೆ.
Web Stories