ಬೆಂಗಳೂರು: ಇನ್ಮುಂದೆ ಸಿಲಿಕಾನ್ ಸಿಟಿಯಲ್ಲಿರುವ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ಮಾಡಲು ಅವಕಾಶ ನೀಡಬಾರದೆಂದು ಇಂದು ಬಿಬಿಎಂಪಿ ಮಾಸಿಕ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಟೌನ್‍ಹಾಲ್ ಮೈಸೂರು ರೋಡ್, ಕಾರ್ಪೋರೇಷನ್ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಜಂಕ್ಷನ್ ಆಗಿದೆ. ಈ ಹೋರಾಟಗಳಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಜೊತೆಗೆ ಟೌನ್‍ಹಾಲ್ ಪ್ರತಿಭಟನೆ ಸ್ಥಳವೆಂದು ಕಾರ್ಯಕ್ರಮಗಳಿಗೆ ಬಾಡಿಗೆ ಪಡೆಯುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.
Advertisement
Advertisement
ಟೌನ್‍ಹಾಲ್ ಬಾಡಿಗೆ ಸದ್ಯ 80 ಸಾವಿರ ಇದೆ. ಹೀಗಿದ್ದರೂ ಜನರು ಪ್ರತಿಭಟನೆ ಜಾಗ, ಟ್ರಾಫಿಕ್ ಜಾಮ್ ಆಗಲಿದೆ ಎಂದು ಯಾರು ಟೌನ್ ಹಾಲ್ ಕಡೆ ತಲೆ ಹಾಕುತ್ತಿಲ್ಲ. ಈ ಎಲ್ಲ ಕಾರಣಗಳಿಗಾಗಿ ಟೌನ್‍ಹಾಲ್ ಮುಂಭಾಗ ಧರಣಿಗೆ ಅನುಮತಿನೀಡಬಾರದೆಂದು ಪೊಲೀಸ್ ಕಮಿಷನರ್ ಗೆ ಪತ್ರ ವ್ಯವಹಾರ ಮಾಡಲು ಇಂದು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
Advertisement
ಸಿಎಎ, ಎನ್‍ಆರ್‍ಸಿ ಹೋರಾಟ ಹತ್ತಿಕ್ಕಲು ಟೌನ್ ಹಾಲ್ ಧರಣಿ ಬ್ಯಾನ್ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಅಕ್ರೋಶ ವ್ಯಕ್ತಪಡಿಸಿದರು.