ದೋಹಾ: ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಅಮೆರಿಕ ಡಾಲರ್‌ಗೆ ಪೈಪೋಟಿ ನೀಡಲು ಹೊಸ ಕರೆನ್ಸಿ (New Currency) ಆರಂಭಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ (S Jaishankar) ಕತಾರ್‌ನಲ್ಲಿ ಮಾತನಾಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತ ಸೇರಿದಂತೆ ಬ್ರಿಕ್ಸ್ (BRICS) ರಾಷ್ಟ್ರಗಳಿಗೆ 100 ಪ್ರತಿಶತ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: 16ನೇ ವರ್ಷಕ್ಕೆ ಸ್ಕೂಲ್ ಡ್ರಾಪ್‌ಔಟ್ – ಬಿಲಿಯನೇರ್, ಗಗನಯಾತ್ರಿ ಈಗ ನಾಸಾ ಮುಖ್ಯಸ್ಥ!
ಅಕ್ಟೋಬರ್‌ನಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲಿ ಡಾಲರ್ ಹೊರತಾದ ವಹಿವಾಟುಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿತ್ತು. BRICS ಗುಂಪು ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳನ್ನು ಒಳಗೊಂಡಿದೆ. ಅವರು ಹೊಸ ಬ್ರಿಕ್ಸ್ ಕರೆನ್ಸಿಯನ್ನು ರಚಿಸುವುದಿಲ್ಲ ಅಥವಾ ಪ್ರಬಲವಾದ ಯುಎಸ್ ಡಾಲರ್ ಬದಲಿಗೆ ಯಾವುದೇ ಇತರ ಕರೆನ್ಸಿಗೆ ಬೆಂಬಲಿಸುವುದಿಲ್ಲ ಎನ್ನುವ ಬಗ್ಗೆ ಈ ದೇಶಗಳಿಂದ ನಮಗೆ ಬದ್ಧತೆಯ ಅಗತ್ಯವಿದೆ. ಇಲ್ಲದಿದ್ದರೆ ಅವರು 100% ಟ್ಯಾಕ್ಸ್ ಎದುರಿಸುತ್ತಾರೆ ಎಂದು ಟ್ರಂಪ್ ಹೇಳಿದ್ದರು.
ಈ ಕುರಿತು ಮಾತನಾಡಿರುವ ಜೈ ಶಂಕರ್, ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದಿದ್ದಾರೆ. ಭಾರತ – ಅಮೆರಿಕದೊಂದಿಗೆ ಉತ್ತಮ ಮತ್ತು ಬಹಳ ಗಟ್ಟಿಯಾದ ಸಂಬಂಧ ಹೊಂದಿದೆ. ಕೆಲವು ಸಮಸ್ಯೆಗಳಾಗಿ ವ್ಯಾಪಾರ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಆದ್ರೆ ಟ್ರಂಪ್ ಅಡಿಯಲ್ಲಿ QUAD ಅನ್ನು ಮರುಪ್ರಾರಂಭಿಸಲಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ಸಿರಿಯಾದಲ್ಲಿ ಹೆಚ್ಚಿದ ಹಿಂಸಾಚಾರ – ಕೂಡಲೇ ದೇಶವನ್ನು ತೊರೆಯಿರಿ; ಭಾರತೀಯರಿಗೆ ಸೂಚನೆ
ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ವೈಯಕ್ತಿಕ ಸಂಬಂಧವಿದೆ. ಇದು ಉಭಯ ದೇಶಗಳ ನಡುವಿನ ಬಲವಾದ ದ್ವಿಪಕ್ಷೀಯ ಬಾಂಧವ್ಯಕ್ಕೆ ಕೊಡುಗೆ ನೀಡಿದೆ. ಭಾರತವು ಡಾಲರೀಕರಣಕ್ಕೆ ಎಂದಿಗೂ ಮುಂದಾಗಿಲ್ಲ. ಏಕೆಂದರೆ ಅಮೆರಿಕ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ. ಡಾಲರ್ ದುರ್ಬಲಗೊಳಿಸುವ ಆಸಕ್ತಿ ನಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಿಯೆಟ್ನಾಂ ಯುವತಿಯರಿಗೆ ಬಾಡಿಗೆಗೆ ಬಾಯ್‌ಫ್ರೆಂಡ್ ಬೇಕಂತೆ..; ಸೃಷ್ಟಿಯಾಗಿದೆ ಹೊಸ ಟ್ರೆಂಡ್ – ಯಾಕೆ ಗೊತ್ತಾ?