ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಡ್ಯೂಟಿ ಡಾಕ್ಟರ್ ಇಲ್ಲದಿರುವುದನ್ನು ಖಂಡಿಸಿ, ಮೆಗ್ಗಾನ್ ಆಸ್ಪತ್ರೆ ಮುಂಭಾಗ ರೋಗಿ ಕಡೆಯವರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೆಳಕೆರೆ ಗ್ರಾಮದ ಪ್ರವೀಣ್ ಅವರ ಮೇಲೆ ಹಲ್ಲೆಯಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವ ಉಂಟಾಗಿತ್ತು. ಈಗಾಗಿ ಹಲ್ಲೆಗೊಳಗಾದ ಪ್ರವೀಣ್ ಅವರನ್ನು ತೀರ್ಥಹಳ್ಳಿಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ರಾತ್ರಿಯೇ ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ರೋಗಿಗೆ ತುರ್ತು ಚಿಕಿತ್ಸೆ ಅಗತ್ಯ ಇದ್ದರೂ, ಡ್ಯೂಟಿ ಡಾಕ್ಟರ್ ಇಲ್ಲದ ಕಾರಣ ಎರಡು ಗಂಟೆಗಳ ಕಾಲ ಪರದಾಡುವಂತಾಗಿತ್ತು. ನಂತರ ಡಾಕ್ಟರ್ ಇಲ್ಲದ ಕಾರಣ ಮೆಡಿಕಲ್ ವಿದ್ಯಾರ್ಥಿಗಳಿಂದಲೇ ಚಿಕಿತ್ಸೆ ಕೊಡಿಸಿ ವಾರ್ಡ್‍ಗೆ ಶಿಫ್ಟ್ ಮಾಡಿಸಲಾಯಿತು ಎಂದು ಪ್ರವೀಣ್ ಸ್ನೇಹಿತ ಪೂರ್ಣೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ಭಗವಂತ್ ಮಾನ್ ಭೇಟಿಯಾದ ನಂತರ ಊಟದ ತಟ್ಟೆಗೆ ಕಿತ್ತಾಡಿದ ಶಿಕ್ಷಕರು, ಪ್ರಾಂಶುಪಾಲರು
Advertisement
Advertisement
ಈ ಹಿನ್ನೆಲೆ ಪೂರ್ಣೇಶ್ ಏಕಾಂಗಿಯಾಗಿ, ಸರಿಯಾದ ಸಮಯಕ್ಕೆ ಬಡವರಿಗೆ ಸಿಗಲ್ವ ಉಚಿತ, ಗುಣಮಟ್ಟದ ಚಿಕಿತ್ಸೆ ಎಂದು ಪ್ರತಿಭಟನೆ ಮಾಡಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂತಹ ಸಮಸ್ಯೆ ಇದೇ ಮೊದಲೇನು ಅಲ್ಲ. ರಾತ್ರಿ ವೇಳೆ ಡ್ಯೂಟಿ ಡಾಕ್ಟರ್‍ಗಳು ಇರುವುದಿಲ್ಲ ಎಂದು ರೋಗಿಗಳು ಹಲವು ಬಾರಿ ಆರೋಪಿಸಿದ್ದಾರೆ. ಇಷ್ಟಾದರೂ ಮೆಗ್ಗಾನ್ ಆಸ್ಪತ್ರೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ರಕ್ತಸ್ರಾವಕ್ಕೆ ಕಾರಣವೇನು?
ತೀರ್ಥಹಳ್ಳಿ ತಾಲೂಕಿನ ಕೆಳಕೆರೆ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಪ್ರವೀಣ್ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದೆ. ಈ ಹಿನ್ನೆಲೆ ಮಧ್ಯರಾತ್ರಿ ಮೆಗ್ಗಾನ್‍ಗೆ ಹಲ್ಲೆಗೊಳಗಾದ ಪ್ರವೀಣ್‍ನನ್ನು ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಸಿಗದೇ ರೋಗಿ ಪರದಾಡುವಂತಾಗಿತ್ತು. ಇದನ್ನೂ ಓದಿ: ಪಾಕ್‍ನಲ್ಲಿ ಹಿಂದೂ ದೇವಾಲಯ ಧ್ವಂಸ ಮಾಡಿದ 22 ಮಂದಿಗೆ 5 ವರ್ಷ ಜೈಲು ಶಿಕ್ಷೆ