ಚಾಮರಾಜನಗರ: ವಿದ್ಯುತ್ ಕಣ್ಣಾಮುಚ್ಚಾಲೆ ರೋಗದಿಂದ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ ನರಳುತ್ತಿದ್ದು, ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಚಿಕಿತ್ಸೆ ನೀಡಬೇಕಿದೆ.
ಸುಮಾರು 2 ತಾಸುಗಳ ಕಾಲ ಎರಡು ಬಾರಿ ವಿದ್ಯುತ್ ಕೈಕೊಟ್ಟು ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಮೊಬೈಲ್ ಟಾರ್ಚ್ ಮೊರೆ ಹೋದ ಪ್ರಸಂಗ ನಡೆದಿದೆ. ಉಪವಿಭಾಗ ಆಸ್ಪತ್ರೆಯಾಗಿದ್ದರೂ ಕನಿಷ್ಠ ಜನರೇಟರ್ ಸೌಲಭ್ಯವೂ ಇಲ್ಲದಿರುವುದು ಆಸ್ಪತ್ರೆ ದುಸ್ಥಿತಿಗೆ ಸಾಕ್ಷಿಯಾಗಿದೆ.
Advertisement
Advertisement
ಕರೆಂಟ್ ಕೈ ಕೊಟ್ಟಾಗಲೆಲ್ಲಾ ಇಲ್ಲಿನ ರೋಗಿಗಳ ಸಂಬಂಧಿಗಳು, ಶುಶ್ರೂಕಿಯರು ಸೇರಿದಂತೆ ಸಿಬ್ಬಂದಿ ಮೊಬೈಲ್ ಟಾರ್ಚ್ ಸಹಾಯದಿಂದಲೇ ಕಾರ್ಯ ನಿರ್ವಹಿಸಲಿದ್ದು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಶಾಸಕ ಎನ್. ಮಹೇಶ್ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Advertisement
ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ತಲೆದೂರಿರುವ ವಿಡಿಯೋ ಹಾಗೂ ಫೋಟೋಗಳನ್ನು ಸ್ಥಳೀಯರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.