-ಎಲೆಕ್ಷನ್ ಹೊತ್ತಲ್ಲಿ ರೆಡ್ಡಿ ಬ್ರದರ್ಸ್ ಬಚಾವ್..?
ಬೆಂಗಳೂರು: ಕರ್ನಾಟಕದ ರಾಜಕಾರಣವನ್ನೇ ತಲ್ಲಣಿಸಿದ್ದ ಬಹುಕೋಟಿ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ಸದ್ದಿಲ್ಲದೆ ಕೊನೆಮಾಡುತ್ತಿದೆ.
ಮೊದಲ ಬಾರಿಗೆ ಅಧಿಕಾರದಲ್ಲಿದ್ದ ಬಿಜೆಪಿಗೆ ಕಂಟಕವಾಗಿದ್ದ ಈ ಹಗರಣವನ್ನು ತನಿಖೆ ಮಾಡುವಂತೆ ಸಿಬಿಐಗೆ ಒಪ್ಪಿಸಲಾಗಿತ್ತು. ಆಂಧ್ರ ಪ್ರದೇಶ, ಮಂಗಳೂರು, ಗೋವಾ, ಮತ್ತು ಕೃಷ್ಣಪಟ್ಟಣ ಬಂದರುಗಳಿಂದ ಅಕ್ರಮ ಅದಿರಿನ ರಫ್ತು ನಡೆಯುತ್ತಿದ್ದು, ಅಲ್ಲಿಂದನೇ ಪ್ರಾಥಮಿಕ ಶೋಧ ಕಾರ್ಯಚರಣೆ ಆರಂಭವಾಗಿದೆ. ಆದರೆ ಮೊದಲ ಹಂತದಲ್ಲಿಯೇ ಸಿಬಿಐಗೆ ಪ್ರಕರಣಗಳಿಗೆ ಸಂಬಂಧಿಸಿಂತೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಕೈ ಚೆಲ್ಲಿ ಕುಳಿತಿದೆ.
Advertisement
Advertisement
ಸುಪ್ರೀಂ ಕೋರ್ಟ್ ಈ ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಆದೇಶ ನೀಡಿದಾಗ ಸಿಬಿಐ, ಜನಾರ್ದನ ರೆಡ್ಡಿ ಮತ್ತು ಅಕ್ರಮ ಗಣಿಗಾರಿಕೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾದ ಕಂಪನಿಗಳ ವಿರುದ್ಧ ಚಾರ್ಜ್ ಸೀಟ್‍ಗಳನ್ನು ಹಾಕಲಾಗಿತ್ತು.
Advertisement
ಅಕ್ರಮ ಗಣಿಗಾರಿಕೆ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು, 2012 ರಲ್ಲಿ ಸಚಿವಾಲಯ ಸುಮಾರು 25 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಂದಾಜಿಸಿ ಸಿಬಿಐ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.
Advertisement
ಸಿಬಿಐ ಸಲ್ಲಿದ ವದರಿಯ ಪ್ರಕಾರ, ಆಂಧ್ರ ಪ್ರದೇಶ, ಗೋವಾ ಮತ್ತು ಕರ್ನಾಟಕ ಸಿಬಿಐನ ಅಧಿಕಾರಿಗಳು ಪ್ರಕರಣವನ್ನು ಮುಚ್ಚುವಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಪ್ರಾಥಮಿಕ ಹಂತದಲ್ಲಿಯೇ ಅಕ್ರಮ ಗಣಿಗಾರಿಕೆ ಸಾಬೀತಿಗೆ ಸಾಕ್ಷ್ಯಗಳೇ ಇಲ್ಲವೆಂದು ಸಿಬಿಐ ತನಿಖಾಧಿಕಾರಿಗಳಿಂದ ಮೇಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
* 2006 ರಿಂದ 2010ರವರೆಗೆ 12.57 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಸಾಗಾಟ
* ಇದರಲ್ಲಿ 2.98 ಕೋಟಿ ಮೆಟ್ರಿಕ್ ಟನ್‍ನಷ್ಟು ಪ್ರಮಾಣದ ಕಬ್ಬಿಣದ ಅದಿರು ಅಕ್ರಮ ಸಾಗಾಟ
* ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐನಿಂದ ತನಿಖೆ, ಆರೋಪಪಟ್ಟಿ ಸಲ್ಲಿಕೆ
* ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿ ಪ್ರಮುಖರ ವಿರುದ್ಧ ಎಫ್‍ಐಆರ್, ಬಂಧನ
* ಬೇಲೆಕೇರಿ, ನವ ಮಂಗಳೂರು ಬಂದರಿಂದ 50 ಸಾವಿರ ಮೆಟ್ರಿಕ್ ಟನ್‍ನ್ನಷ್ಟು ಅಕ್ರಮವಾಗಿ ಅದಿರು ಸಾಗಾಟ
* ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರದಿಂದ ಎಸ್‍ಐಟಿ ಸ್ಥಾಪನೆ