ಬೆಂಗಳೂರು: ಪ್ಲಾಸ್ಟಿಕ್ ಫುಡ್ ಆತಂಕದಲ್ಲಿರುವ ಬೆಂಗಳೂರು ಜನರಿಗೆ ಒಂದು ಗುಡ್‍ನ್ಯೂಸ್. ನೀವು ತಿನ್ನೋದು ಪ್ಲಾಸ್ಟಿಕ್ ಅಕ್ಕಿ ಅಲ್ಲ. ಪ್ಲಾಸ್ಟಿಕ್ ಮೊಟ್ಟೆ ಅಲ್ಲ. ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ಲ್ಯಾಬ್ ರಿಪೋರ್ಟ್‍ನಲ್ಲಿ ಈ ವಿಚಾರ ಬಹಿರಂಗವಾಗಿದೆ.
Advertisement
ರಾಜ್ಯದ ಕೆಲವೆಡೆ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಮಾರಾಟವಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಸ್ಯಾಂಪಲ್ ಅಕ್ಕಿ, ಸಕ್ಕರೆ, ಮೊಟ್ಟೆಯನ್ನು ಸರ್ಕಾರಿ ಲ್ಯಾಬ್ ಹಾಗೂ ಖಾಸಗಿ ಲ್ಯಾಬ್‍ನಲ್ಲಿ ಪರೀಕ್ಷಿಸಲಾಗಿತ್ತು. ಸದ್ಯ ಈ ಸ್ಯಾಂಪಲ್ ಟೆಸ್ಟ್ ವರದಿ ಅಧಿಕಾರಿಗಳ ಕೈ ಸೇರಿದೆ. ಬೆಂಗಳೂರಿನಲ್ಲಿ ಯಾವುದೇ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ ಇಲ್ಲ ಅಂತ ಆಹಾರ ಸುರಕ್ಷತಾ ಇಲಾಖೆ ಉಪ ಆಯುಕ್ತ ಡಾ. ಹರ್ಷವರ್ಧನ್ ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಕೊಪ್ಪಳ, ಮಂಡ್ಯ, ರಾಮನಗರದ ಸ್ಯಾಂಪಲ್‍ಗಳನ್ನು ಪರೀಕ್ಷಿಸಲು ಮೈಸೂರಿಗೆ ಕಳುಹಿಸಲಾಗಿದ್ದು, ಏಳು ದಿನಗಳಲ್ಲಿ ಅದರ ವರದಿ ಕೂಡ ಸಿಗಲಿದೆ.
Advertisement
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜನರುಮನೆಯಲ್ಲಿಬಳಸಿದ ಅಕ್ಕಿಯಿಂದ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ತಾವು ಬಳಸುತ್ತಿರುವುದು ಪ್ಲಾಸ್ಟಿಕ್ ಅಕ್ಕಿ ಎಂದು ಆತಂಕಗೊಂಡಿದ್ದರು. ಅಕ್ಕಿಯನ್ನು ಬೇಯಿಸಿ ಉಂಡೆ ಮಾಡಿ ನೆಲಕ್ಕೆ ಬಡಿದರೆ ಅದು ಬೌನ್ಸ್ ಆಗುತ್ತಿದ್ದ ಕಾರಣ ಆತಂಕ ಸೃಷ್ಟಿಯಾಗಿತ್ತು. ಇದೀಗ ಆಹಾರ ಸುರಕ್ಷತಾ ಇಲಾಖೆಯ ವರದಿ ಬಂದಿದ್ದು, ಅಕ್ಕಿ, ಮೊಟ್ಟೆ, ಸಕ್ಕರೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.