ಬೀದರ್: ಮೊಬೈಲ್ನಲ್ಲಿ ವೀಡಿಯೋ ಮಾಡಿಟ್ಟುಕೊಂಡು ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ನೌಬಾದ್ ಬಳಿ ನಡೆದಿದೆ.
ನಗರದ ಅಬ್ದುಲ್ ಫೈಜಾ ದರ್ಗಾ ನಿವಾಸಿಯಾಗಿರುವ ಸೈಯದ್ ಅಮೀರ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಸೈಯದ್ ವೀಡಿಯೋ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಯಾವುದೇ ಒತ್ತಡ ಇಲ್ಲ, ನಾನು ನನ್ನ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತ ಯುವಕನು ವೀಡಿಯೋದಲ್ಲಿ ಹೇಳಿದ್ದಾನೆ. ಇದನ್ನೂ ಓದಿ: ಫಿಟ್ನೆಸ್ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್
ಎನ್ಜಿಓ ಸದಸ್ಯರು ಹಾಗೂ ಸ್ಥಳೀಯರ ಹಗ್ಗದ ಸಹಾಯದಿಂದ ಬಾವಿಯಿಂದ ಮೃತದೇಹವನ್ನು ಮೇಲೆ ತೆಗೆಯುತ್ತಿರುವ ದೃಶ್ಯವು ನೋಡಲು ಭಯಾನಕವಾಗಿದೆ. ಸದ್ಯ ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮಹಾಭಾರತ ಸೀರಿಯಲ್ನ ಭೀಮ್ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ಇನ್ನಿಲ್ಲ