ನವದೆಹಲಿ: ಬಾಕಿ ಹಣವನ್ನು ನ.7ರ ಒಳಗಡೆ ಪಾವತಿಸದೇ ಇದ್ದರೆ ಸಂಪೂರ್ಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗುವುದು ಎಂದು ಅದಾನಿ ಪವರ್ (Adani Power) ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಿದೆ.
ಬಾಂಗ್ಲಾದೇಶ 850 ಡಾಲರ್ (ಅಂದಾಜು 7,200 ಕೋಟಿ ರೂ.) ಹಣವನ್ನು ಅದಾನಿ ಕಂಪನಿಗೆ ಪಾವತಿಸಬೇಕಿದೆ. ಈ ಮೊದಲು ಅ.31ರ ಒಳಗಡೆ ಪಾವತಿಸಲು ಅದಾನಿ ಕಂಪನಿ ಗಡುವು ನೀಡಿತ್ತು. ಈ ಗಡುವಿನ ಒಳಗಡೆ ಪಾವತಿಸದ್ದಕ್ಕೆ ಈಗ ಅದಾನಿ ಪವರ್‌ನ ಅಂಗ ಸಂಸ್ಥೆಯಾದ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ (APJL) ಬಾಂಗ್ಲಾದೇಶಕ್ಕೆ (Bangladesh) ತನ್ನ ವಿದ್ಯುತ್ ಸರಬರಾಜನ್ನು ಅರ್ಧದಷ್ಟು ಕಡಿಮೆ ಮಾಡಿದೆ.
Advertisement
Advertisement
ಗುರುವಾರ ರಾತ್ರಿಯಿಂದ ವಿದ್ಯುತ್ ಕಡಿತದಿಂದಾಗಿ ಬಾಂಗ್ಲಾದೇಶಲ್ಲಿ 1,600 ಮೆಗಾವ್ಯಾಟ್‌ಗಳನ್ನು (MW) ವಿದ್ಯುತ್ ಕೊರತೆಯಾಗಿದೆ. 1,496 MW ಅದಾನಿ ಸ್ಥಾವರವು ಈಗ ಅರ್ಧ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೇವಲ 700 MW ವಿದ್ಯುತ್ ಮಾತ್ರ ಉತ್ಪಾದಿಸುತ್ತದೆ. ಇದನ್ನೂ ಓದಿ: ದೆಹಲಿಗೆ ಕಲುಷಿತ ನೀರು ಪೂರೈಕೆ – ಸಿಎಂ ಮನೆ ಮುಂದೆ ಕೊಳಕು ನೀರು ಸುರಿದ ಸ್ವಾತಿ ಮಲಿವಾಲ್
Advertisement
ಬಾಂಗ್ಲಾದೇಶದ ಪವರ್ ಡೆವಲಪ್‌ಮೆಂಟ್ ಬೋರ್ಡ್ (BPDB) ತನ್ನ ಬಾಕಿಗಳನ್ನು ಪಾವತಿಸಲು ಕೆಲಸ ಮಾಡುತ್ತಿದೆ. ಪಾವತಿಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು 170 ಮಿಲಿಯನ್ ಡಾಲರ್ (ಸುಮಾರು ರೂ 1,500 ಕೋಟಿ) ಸಾಲದ ಪತ್ರವನ್ನು (Letter of Credit) ಒದಗಿಸಿದೆ. ಬಿಪಿಡಿಪಿ ಕೃಷಿ ಬ್ಯಾಂಕ್ ಮೂಲಕ LC ನೀಡಲು ಪ್ರಯತ್ನಿಸಿದೆ. ಈ ಕ್ರಮವು ವಿದ್ಯುತ್ ಖರೀದಿ ಒಪ್ಪಂದದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಮೂಲವೊಂದು ಮಾಧ್ಯಮಕ್ಕೆ ತಿಳಿಸಿದೆ.
Advertisement
ಅದಾನಿ ಪವರ್ ತನ್ನ ಪೂರೈಕೆಯನ್ನು ಅರ್ಧದಷ್ಟು ಕಡಿಮೆಗೊಳಿಸುವುದರಿಂದ ಕೈಗಾರಿಕೆ, ವ್ಯವಹಾರಗಳು ಮತ್ತು ಗೃಹ ಬಳಕೆಯ ಮನೆಗಳಿಗೂ ಸಮಸ್ಯೆಯಾಗುತ್ತಿದೆ.
ಶೇಖ್ ಹಸೀನಾ ಸರ್ಕಾರವನ್ನು ಇಳಿಸಿದ ಬಳಿಕ ಬಾಂಗ್ಲಾದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಬಾಂಗ್ಲಾದೇಶ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ಗ್ರಾಹಕ ಹಣದುಬ್ಬರ 12 ವರ್ಷಕ್ಕಿಂತ ಹೆಚ್ಚಾಗಿದ್ದು, 11.6%ಕ್ಕೆ ತಲುಪಿದೆ. ಅದರಲ್ಲೂ ಆಹಾರ ಹಣದುಬ್ಬರವು ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 14 ಪ್ರತಿಶತವನ್ನು ಮೀರಿದೆ. ಹಣದುಬ್ಬರ ನಿಯಂತ್ರಿಸಲು ಬಾಂಗ್ಲಾ ಕೇಂದ್ರ ಬ್ಯಾಂಕ್ ರೆಪೋ ದರವನ್ನು 10% ಏರಿಕೆ ಮಾಡಿದೆ.