ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 15ನೇ ಆವೃತ್ತಿ ಐಪಿಎಲ್ ಭರ್ಜರಿ ಪ್ರದರ್ಶನ ನೀಡಿದ ಬ್ಯಾಟ್ಸ್ಮನ್ ರಾಹುಲ್ ತ್ರಿಪಾಠಿಗೆ ಸ್ಥಾನ ಕಲ್ಪಿಸಿಕೊಟ್ಟಿಲ್ಲ ಈ ಕಾರಣಕ್ಕೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
Advertisement
ಈ ಬಾರಿಯ ಐಪಿಎಲ್‌ನಲ್ಲಿ ತ್ರಿಪಾಠಿ 12 ಪಂದ್ಯಗಳಲ್ಲಿ 413 ರನ್ ಗಳಿಸಿ ಗಮನ ಸೆಳೆದಿದ್ದರು. ಪಂದ್ಯಗಳಲ್ಲಿ ತ್ರಿಪಾಠಿ 3 ಅರ್ಧಶತಕ ಸೇರಿದಂತೆ 161.73 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಎದೆ ಹಿಡಿದುಕೊಂಡು ಮೈದಾನದಲ್ಲೇ ಕುಸಿದು ಬಿದ್ದ ಲಂಕಾ ಕ್ರಿಕೆಟಿಗ
Advertisement
Advertisement
ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಆಯ್ಕೆ ಮಾಡಿದ ತಂಡದಲ್ಲಿ ತ್ರಿಪಾಠಿ ಹೆಸರು ಕಾಣಿಸದಿದ್ದಾಗ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಅವಕಾಶಕ್ಕೆ ತ್ರಿಪಾಠಿ ಅರ್ಹರಿದ್ದರೂ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಂದ್ಯವಾಡದೇ ಆರ್‌ಸಿಬಿ ಮನೆಗೆ ಬರುತ್ತಾ?
Advertisement
Disappointed to not see Rahul Tripathi’s name in the squad. He deserved a chance.
— Harbhajan Turbanator (@harbhajan_singh) May 22, 2022
ದಕ್ಷಿಣ ಆಫ್ರಿಕಾ ಸರಣಿಗೆ ಇಂಡಿಯಾ ತಂಡದಲ್ಲಿ ಬಿಸಿಸಿಐ ಕೆಎಲ್ ರಾಹುಲ್‌ರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ರಿಷಬ್ ಪಂತ್ ಉಪನಾಯಕರಾಗಿದ್ದಾರೆ. ಈ ಬಾರಿ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.
That would have allowed Rahul Tripathi to make it https://t.co/oJnJWdkagm
— Harsha Bhogle (@bhogleharsha) May 22, 2022
ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ20 ಸರಣಿ ಜೂನ್ 9ರಿಂದ ಪ್ರಾರಂಭವಾಗಲಿದೆ.