ಭಯೋತ್ಪಾದನೆ, ಶಾಂತಿ ಒಟ್ಟಿಗೆ ಇರಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್ ಗುಡುಗು

Public TV
1 Min Read
Rajnath Singh SCO Meet China

ನವದೆಹಲಿ/ಬೀಜಿಂಗ್: ಕೆಲವು ದೇಶಗಳು ತಮ್ಮ ನೀತಿಗಳಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯನ್ನು (Terrorism) ಅಸ್ತ್ರವಾಗಿ ಬಳಸುತ್ತಿವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿವೆ. ಅಂತಹ ದ್ವಿಮುಖ ನೀತಿಗಳನ್ನು ಕೊನೆಗೊಳಿಸುವುದು ಬಹಳ ಮುಖ್ಯ ಮತ್ತು SCOನಂತಹ ವೇದಿಕೆಯು ಅಂತಹ ಶಕ್ತಿಗಳನ್ನು ಬಹಿರಂಗವಾಗಿ ಟೀಕಿಸಬೇಕು ಎಂದು ರಕ್ಷಣಾ ರಾಜನಾಥ್ ಸಿಂಗ್ (Rajnath Singh) ಹೇಳಿದರು.

ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ರಕ್ಷಣಾ ಸಚಿವರ ಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನದ ಮೇಲೆ ಪರೋಕ್ಷ ದಾಳಿ ನಡೆಸಿದರು. ಭಯೋತ್ಪಾದನೆ ಮತ್ತು ಶಾಂತಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ಭಾರತದ ಭಯೋತ್ಪಾದನೆಯ ವಿಷಯದ ಬಗ್ಗೆ ತನ್ನ ಕಠಿಣ ನಿಲುವನ್ನು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಾಸನ | 22 ವರ್ಷದ ಪದವೀಧರೆ ಹೃದಯಾಘಾತಕ್ಕೆ ಬಲಿ

ಭಯೋತ್ಪಾದನೆಯ ವಿರುದ್ಧ ಒಂದಾಗಲು ಕರೆ ನೀಡಿದ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರದ ಮೂಲಕ ಭಾರತ ಭಯೋತ್ಪಾದನೆಯ ಮೇಲೆ ಯಾವುದೇ ಒತ್ತಡ ಅಥವಾ ರಾಜಿಗೆ ಸಿದ್ಧವಾಗಿಲ್ಲ ಎಂದು ಮತ್ತೊಮ್ಮೆ ತೋರಿಸಿದೆ. ನಮ್ಮ ಹೋರಾಟಕ್ಕೆ ಇತರೆ ದೇಶಗಳು ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ಸಭೆ ಮುಂದೂಡಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

SCOಯಲ್ಲಿ ಭಾರತ, ಚೀನಾ, ಪಾಕಿಸ್ತಾನ, ರಷ್ಯಾ ಸೇರಿದಂತೆ ಒಟ್ಟು ಹತ್ತು ಸದಸ್ಯ ರಾಷ್ಟ್ರಗಳಿದೆ. ಈ ಬಾರಿ  SCO ಅಧ್ಯಕ್ಷರಾಗಿರುವ ಚೀನಾ ಮತ್ತು ಅದರ ಆಪ್ತ ಮಿತ್ರ ಪಾಕಿಸ್ತಾನ ಇಬ್ಬರೂ ಒಟ್ಟಾಗಿ SCO ದಾಖಲೆಯಲ್ಲಿ ಭಯೋತ್ಪಾದನೆಯ ಮೇಲಿನ ಗಮನವನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ಆದರೆ ಭಾರತ ಇದಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತು ಮತ್ತು ತನ್ನ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ವಿಶೇಷವಾಗಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ, ಭಯೋತ್ಪಾದನೆಯ ಮೇಲೆ ಯಾವುದೇ ದಯೆಯನ್ನು ಸಹಿಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮೊಳಕೆ ಒಡೆಯಲಿವೆ ಧಾರವಾಡ ಕೃಷಿ ವಿವಿಯ ಮೆಂತೆ, ಹೆಸರು ಕಾಳು!

Share This Article