ಬೆಂಗಳೂರು: ಕಡಿಮೆ ಬೆಲೆಯ ಜನೌಷಧಿ (Janaushadhi) ಕೇಂದ್ರದ ವಿಚಾರದಲ್ಲಿ ರಾಜಕೀಯ ಆರಂಭವಾಯಿತೇ? ಮೋದಿ ವಿರೋಧಿಸೋ ಸಲುವಾಗಿಯೇ ಜನೌಷಧಿ ಕೇಂದ್ರಕ್ಕೆ ಸರ್ಕಾರ ಬ್ರೇಕ್ ಹಾಕಲು ಮುಂದಾಯಿತೇ ಎಂಬ ಪ್ರಶ್ನೆ ಎದ್ದಿದೆ.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ (Sharan Prakash Patil) ಅವರು ನೀಡಿದ ಒಂದು ಹೇಳಿಕೆಯಿಂದ ಈ ಪ್ರಶ್ನೆ ಈಗ ಎದ್ದಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಹೊಸ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಉಚಿತವಾಗಿ ಸಿಗುವಾಗ ಜನೌಷಧಿ ಕೇಂದ್ರ ಯಾಕೆ ಬೇಕು? ಇದರಿಂದ ಆಸ್ಪತ್ರೆಯ ಒಳಗಡೆ ವರ್ತುಲ ಸೃಷ್ಟಿಯಾಗುತ್ತದೆ. ಹಿಂದೆ ಯಾರು ಅನುಮತಿ ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಹೊಸ ಜನೌಷಧಿ ಕೇಂದ್ರ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಆಗಿಯೇ ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತವಾಗಿ ಮಾತ್ರೆ ಕೊಡುತ್ತೇವೆ. ಹೀಗಾಗಿ ಜನರು ದುಡ್ಡು ನೀಡಿ ಮಾತ್ರೆ ಖರೀದಿ ಮಾಡುವುದು ಯಾಕೆ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.
ಸರ್ಕಾರದಿಂದ ಔಷಧಿಗಳು, ಮಾತ್ರೆಗಳು ಉಚಿತ ಬರುತ್ತದೆ ಹೌದು. ಆದರೆ ಎಲ್ಲಾ ಮಾತ್ರೆಗಳು ಸಿಗುವುದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಬಳಿ ಜನೌಷಧಿ ಕೇಂದ್ರ ತೆರೆದರೆ ನಿಮಗೆ ಏನು ಕಷ್ಟ ಎಂದು ಜನರು ಈಗ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್ – ಅವಮಾನ ಸಹಿಸಲಾರದೇ ಪ್ರಾಂಶುಪಾಲ ರಾಜೀನಾಮೆ
ಯಾವ ಮಾತ್ರೆಗೆ ಎಷ್ಟೆಷ್ಟು ದರ?
> ಡೋಲೋ ಮಾತ್ರೆ
ಮೆಡಿಕಲ್ ಸ್ಟೋರ್- 30 ರೂ. (ಒಂದು ಶೀಟ್‌ಗೆ)
ಜನೌಷಧಿ ಕೇಂದ್ರ- 15 ರೂ. (ಒಂದು ಶೀಟ್‌ಗೆ)
ಡಯಾಬಿಟೀಸ್ ಮಾತ್ರೆ
ಮೆಡಿಕಲ್ ಸ್ಟೋರ್- 20 ರೂ. (ಒಂದು ಶೀಟ್‌ಗೆ)
ಜನೌಷಧಿ ಕೇಂದ್ರ- 6 ರೂ. (ಒಂದು ಶೀಟ್‌ಗೆ)
ಬಿಪಿ ಮಾತ್ರೆ (ಟೆಲ್ಮಾ)
ಮೆಡಿಕಲ್ ಸ್ಟೋರ್- 30 ರೂ. (10 ಮಾತ್ರೆ)
ಜನೌಷಧಿ ಕೇಂದ್ರ- 12 ರೂ.
ಕೊಲೆಸ್ಟ್ರಾಲ್ ಮಾತ್ರೆ (ಅಟೋರ್ವಾ)
ಮೆಡಿಕಲ್ ಸ್ಟೋರ್- 30 ರೂ.
ಕ್ರೇಪ್ ಬ್ಯಾಂಡೇಜ್
ಮೆಡಿಕಲ್ ಸ್ಟೋರ್- 150 ರೂ.
ಜನೌಷಧಿ ಕೇಂದ್ರ- 36 ರೂ.
ಪ್ಯಾರಸೆಟ್‌ಮಲ್
ಜನೌಷಧಿ ಕೇಂದ್ರ- 25-30 ರೂ.
ಮೆಡಿಕಲ್ ಸ್ಟೋರ್-120
ಕೆಮ್ಮಿನ ಔಷಧಿ
ಜನೌಷಧಿ ಕೇಂದ್ರ- 54 ರೂ.
ಮೆಡಿಕಲ್ ಸ್ಟೋರ್- 150 ರೂ.