ಮಡಿಕೇರಿ: ಕನ್ನಡ ನಾಡಿನ ಜೀವನದಿ ಕಾವೇರಿಯ ತೀರ್ಥೋದ್ಭವ ಇದೇ ಅಕ್ಟೋಬರ್ 17ರಂದು ಭಾನುವಾರ ಮಧ್ಯಾಹ್ನ 1.11ಕ್ಕೆ ನಡೆಯಲಿದೆ. ಕೋವಿಡ್ ನಿಬಂಧನೆಗಳ ನೆಪ ಹೇಳಿ ಭಕ್ತರಿಗೆ ತೀಥೋದ್ಭವ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
Advertisement
ಭಕ್ತರು 72 ಗಂಟೆಯ ಕೋವಿಡ್ ನೆಗೆಟಿವ್ ವರದಿ ಪ್ರಮಾಣಪತ್ರ ಹಾಗೂ 1 ಡೋಸ್ ಲಸಿಕೆ ಪಡೆದಿರಬೇಕು, ಗುರುತಿನ ಚೀಟಿ ಕಡ್ಡಾಯಗೊಳಿಸಿದೆ. ಕೋವಿಡ್ ಇನ್ನೂ ದೂರವಾಗಿಲ್ಲ. ಹೀಗಾಗಿ ಕೆಲವು ನಿರ್ಬಂಧ ವಿಧಿಸುವುದು ಅನಿವಾರ್ಯ. ಭಾಗಮಂಡಲದಿಂದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಾತ್ರ ತೀರ್ಥೋದ್ಭವದ ವೇಳೆ ಅವಕಾಶ ಇರಲಿದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಇದು ಭಕ್ತರ ಆಕ್ರೋಶಕ್ಕೆ ಕಾರಣ ಆಗಿದೆ.
Advertisement
Advertisement
ಈಗಾಗಲೇ ಎಲ್ಲ ಚಟುವಟಿಕೆಗಳಿಗೂ ಅನುಮತಿ ನೀಡಲಾಗಿದೆ. ಆದರೆ ಕಾವೇರಿ ತೀರ್ಥೋದ್ಭವ ದರ್ಶನಕ್ಕೆ ನಿರ್ಬಂಧ ಹೇರಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ನಿರ್ಬಂಧ ಸಡಿಲಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಕೊಡವರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Advertisement
ಇತ್ತ ಶಾಸಕ ಕೆ.ಜಿ ಬೋಪಯ್ಯ ಅವರು, ತೀರ್ಥೋದ್ಭವದಲ್ಲಿ ಭಾಗವಹಿಸಲು ನಿರ್ಬಂಧವಿಲ್ಲ. ಅಪಪ್ರಚಾರ ಮಾಡಲಾಗಿದೆ ಅಂತ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ದಿಢೀರ್ ದೆಹಲಿ ಬುಲಾವ್ – ಡಿಕೆಶಿ, ಸಿದ್ದು ಜಿದ್ದಿಗೆ ಬೀಳುತ್ತಾ ಬ್ರೇಕ್..?