ರಾಮನಗರ: ಈ ಕದನ ವಿರಾಮದ (Ceasefire) ಬಗ್ಗೆ ನನಗೆ ಸಮಾಧಾನ ಇಲ್ಲ. ಪಾಕಿಸ್ತಾನಕ್ಕೆ (Pakistan) ಇನ್ನೂ ಬುದ್ಧಿ ಕಲಿಸಬೇಕಾಗಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆ ಆಗಿದ್ದರೂ, ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿರುವ ವಿಚಾರದ ಕುರಿತು ರಾಮನಗರದಲ್ಲಿ ಅವರು ಮಾತನಾಡಿದರು. ಪಾಕಿಸ್ತಾನ ಪದೇ ಪದೇ ಚೇಷ್ಟೆ ಮಾಡುತ್ತಲೇ ಬಂದಿದೆ. ಸುಮಾರು 10 ಘಟನೆಗಳಲ್ಲಿ ನೇರವಾಗಿ ಅವರ ಪಾತ್ರ ಇದೆ. ತಾಜ್ ಹೋಟೆಲ್ ಅಟ್ಯಾಕ್, ಪುಲ್ವಾಮ ದಾಳಿ, ಉರಿ ಸೆಕ್ಟರ್ ದಾಳಿ ಹೀಗೆ ಹಲವು ದಾಳಿಗಳ ಮೇಲೆ ಪಾಕಿಸ್ತಾನದ ಕೈವಾಡ ಇದೆ. ಅಲ್ಲಿನ ರಾಜಕಾರಣಿಗಳು, ಹಾಗೂ ಸೇನೆ ಉಗ್ರರಿಗೆ ಸಹಕಾರ ಕೊಡುತ್ತಿವೆ. ಅವರಿಗೆ ಇನ್ನೂ ಬುದ್ಧಿ ಕಲಿಸಬೇಕಾಗಿತ್ತು ಎನ್ನುವುದು ನನ್ನ ಭಾವನೆ. ಸದ್ಯ ಇಷ್ಟಾದರೂ ಬುದ್ಧಿ ಕಲಿಸಿದ್ದಾರಲ್ಲ ಎಂದು ಸಂತೋಷ ಪಡಬೇಕು ಅಷ್ಟೇ ಎಂದರು. ಇದನ್ನೂ ಓದಿ: ಜಮ್ಮು ಗಡಿಯಲ್ಲಿ ಪಾಕ್ ಗುಂಡಿನ ದಾಳಿ – ಗಂಭೀರ ಗಾಯಗೊಂಡಿದ್ದ BSF ಯೋಧ ಹುತಾತ್ಮ
ಉಗ್ರರ ವಿರುದ್ಧದ ಹೋರಾಟಕ್ಕೆ ದೇಶದ ಎಲ್ಲಾ ಪಕ್ಷಗಳು ಕೇಂದ್ರ ಸರ್ಕಾರದ ಜೊತೆಗಿವೆ. ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್ ಆರ್ಮಿ