ಓವನ್ ಇಲ್ಲದೇ ಕೇಕ್ (Cake Without Oven) ಮಾಡೋದು ಕಷ್ಟ. ಆದರೂ ಅಡುಗೆ ಪ್ರಿಯರು ಓವನ್ ಇಲ್ಲದೇ ಕೇಕ್ ಮಾಡುವ ಇತರ ಸುಲಭ ವಿಧಾನಗಳನ್ನು ಹುಡುಕಿದ್ದಾರೆ. ಇಂದು ನಾವು ಪ್ರೆಶರ್ ಕುಕ್ಕರ್‌ನಲ್ಲಿ (Pressure Cooker) ಮಗ್ ಕೇಕ್ (Mug Cake) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ತುಂಬಾ ರುಚಿಯಾದ ಎಗ್‌ಲೆಸ್ ಚಾಕ್ಲೇಟ್ ಮಗ್ ಕೇಕ್ (Eggless Chocolate Mug Cake) ಅನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ ನೋಡಿ.
- Advertisement -
ಬೇಕಾಗುವ ಪದಾರ್ಥಗಳು:
ಮೈದಾ – 6 ಟೀಸ್ಪೂನ್
ಕೋಕೋ ಪುಡಿ – 3 ಟೀಸ್ಪೂನ್
ಸಕ್ಕರೆ – 3 ಟೀಸ್ಪೂನ್
ಅಡುಗೆ ಸೋಡಾ – ಕಾಲು ಟೀಸ್ಪೂನ್
ಉಪ್ಪು – ಚಿಟಿಕೆ
ಹಾಲು – 6 ಟೀಸ್ಪೂನ್
ಎಣ್ಣೆ – 3 ಟೀಸ್ಪೂನ್
ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
ಚಾಕ್ಲೇಟ್ ಚಿಪ್ 2 ಟೀಸ್ಪೂನ್
ಕುಕ್ಕರ್‌ನಲ್ಲಿ ಬೇಯಿಸಲು:
ಉಪ್ಪು – ಒಂದೂವರೆ ಕಪ್ ಇದನ್ನೂ ಓದಿ: ಬೆಳಗ್ಗಿನ ಉಪಾಹಾರಕ್ಕೆ ಮಾಡಿ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು
- Advertisement -
- Advertisement -
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ಒಂದೂವರೆ ಕಪ್ ಉಪ್ಪು ಹಾಕಿ ವಿಸಿಲ್ ಇಡದೇ ಕುಕ್ಕರ್ ಮುಚ್ಚಳವನ್ನು ಮುಚ್ಚಿ, 5-10 ನಿಮಿಷ ಬಿಸಿ ಮಾಡಿ.
* ಈ ನಡುವೆ ಓವನ್ ಸೇಫ್ ಮಗ್ ತೆಗೆದುಕೊಂಡು, ಅದರಲ್ಲಿ ಮೈದಾ, ಕೋಕೋ ಪೌಡರ್, ಸಕ್ಕರೆ, ಅಡುಗೆ ಸೋಡಾ, ಹಾಗೂ ಚಿಟಿಕೆ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಮಿಶ್ರಣಕ್ಕೆ ಹಾಲು, ಎಣ್ಣೆ ಮತ್ತು ವೆನಿಲ್ಲಾ ಸಾರವನ್ನು ಸೇರಿಸಿ, ಗಂಟಿಲ್ಲದಂತೆ ಮಿಕ್ಸ್ ಮಾಡಿ ಬ್ಯಾಟರ್ ತಯಾರಿಸಿ.
* ಈಗ ಕೇಕ್ ಬ್ಯಾಟರ್ ಮೇಲೆ ಚಾಕ್ಲೇಟ್ ಚಿಪ್ ಹಾಕಿ 20 ನಿಮಿಷ ಬೇಯಿಸಿ.
* ಈದೀಗ ಎಗ್‌ಲೆಸ್ ಚಾಕ್ಲೆಟ್ ಮಗ್ ಕೇಕ್ ತಯಾರಾಗಿದ್ದು, ಬೇಕೆಂದರೆ ಮೇಲ್ಗಡೆ ಚಾಕ್ಲೇಟ್ ಸಾಸ್ ಹಾಕಿ, ಆನಂದಿಸಿ. ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ