ಕೊಹಿಮಾ: ನಾಗಾಲ್ಯಾಂಡ್‌ನಲ್ಲಿ (Nagaland) ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ (NDPP-BJP) ಮೈತ್ರಿಕೂಟ ಬಹುಮತದೊಂದಿಗೆ ಜಯದ ನಗೆ ಬೀರಿದೆ. ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟಕ್ಕೆ ಇತರೆ ಪಕ್ಷಗಳು ಸಹ ಬೆಂಬಲ ಸೂಚಿಸಿದ್ದು, ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ.
ಮಾ.2 ರಂದು ನಾಗಾಲ್ಯಾಂಡ್ (Nagaland Opposition) ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಸದನದ ಒಟ್ಟು ಸದಸ್ಯ ಬಲ 60. ಈ ಬಾರಿ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 37 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ಕ್ರಮವಾಗಿ 25 ಮತ್ತು 12 ಸ್ಥಾನಗಳ ಗೆಲುವು ಸಾಧಿಸಿದವು. ಆ ಮೂಲಕ ಸರ್ಕಾರ ರಚನೆಗೆ ಸಿದ್ಧತೆ ನಡೆಸಿವೆ. ಇದನ್ನೂ ಓದಿ: ಆಪ್ ನಾಯಕ ಮನೀಶ್ ಸಿಸೋಡಿಯಾ ಜೈಲುಪಾಲು
ಎನ್‌ಸಿಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳು 7 ಸ್ಥಾನಗಳನ್ನು ಗೆದ್ದಿವೆ. ಎನ್‌ಪಿಪಿ – 5, ಎಲ್‌ಜೆಪಿ (ರಾಮ್ ವಿಲಾಸ್), ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ಆರ್‌ಪಿಐ (ಅಠವಾಲೆ) – ತಲಾ 2, ಜೆಡಿ (ಯು) – 1 ಮತ್ತು ಸ್ವತಂತ್ರರು – 4. ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್ ರಾಜ್ಯ ವಿಧಾನಸಭೆ ಚುನಾವಣೆಯು ಹಲವು ರಾಜಕೀಯ ಪಕ್ಷಗಳ ಗೆಲುವಿಗೆ ಸಾಕ್ಷಿಯಾಗಿದೆ. LJP(RV) ಮತ್ತು RPI (Athawale) ರಾಜ್ಯ ರಾಜಕಾರಣದಲ್ಲಿ ಹೊಸ ಪಕ್ಷಗಳು.
ಎನ್‌ಡಿಪಿಪಿ-ಬಿಜೆಪಿ ಇನ್ನೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ. ಇದರ ನಡುವೆಯೇ ಇತರ ರಾಜಕೀಯ ಪಕ್ಷಗಳಿಂದ ಬೇಷರತ್ ಬೆಂಬಲ ಪಡೆದಿವೆ. ಎಲ್‌ಜೆಪಿ (ರಾಮ್ ವಿಲಾಸ್), ಆರ್‌ಪಿಐ (ಅಠವಳೆ), ಜೆಡಿಯು ಈಗಾಗಲೇ ಮೈತ್ರಿಕೂಟಕ್ಕೆ ಅಧಿಕೃತ ಬೆಂಬಲ ವ್ಯಕ್ತಪಡಿಸಿವೆ. ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ – ಲಾಲು ಪತ್ನಿ, ಮಾಜಿ ಸಿಎಂ Rabri Devi ನಿವಾಸದ ಮೇಲೆ ಸಿಬಿಐ ದಾಳಿ
ಮೂರನೇ ಏಕೈಕ ಅತಿ ದೊಡ್ಡ ಪಕ್ಷವಾಗಿರುವ ಎನ್‌ಸಿಪಿ, ನೆಫಿಯು ರಿಯೊ ನೇತೃತ್ವದ ಎನ್‌ಡಿಪಿಪಿಗೆ ಶನಿವಾರ ‘ಬೇಷರತ್’ ಬೆಂಬಲ ನೀಡುವ ಪತ್ರವನ್ನು ಸಲ್ಲಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಿರುವುದರಿಂದ, ನಾಗಾಲ್ಯಾಂಡ್‌ನಲ್ಲಿ ಸರ್ವಪಕ್ಷ ಸರ್ಕಾರವಾಗುವ ಸಾಧ್ಯತೆ ದಟ್ಟೈಸಿದೆ.