ಧಾರವಾಡ: ಯಾರೂ ರಾಜೀನಾಮೆ ಕೊಡುತ್ತಿದ್ದಾರೋ ಅವರು ಕ್ಷೇತ್ರದಲ್ಲಿ ಮತ್ತೆ ಆರಿಸಿ ಬಾರದಂತೆ ಜನ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಆಗ ಶಂಕರ ಅವರು ಮಂತ್ರಿಯಾಗಿದ್ದರು, ಮಂತ್ರಿ ಇದ್ದಾಗ ಕೆಲಸ ಆಗಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಶಂಕರ್ ಬಿಜೆಪಿ ಒತ್ತಡಕ್ಕೆ ಮಣಿದು ಬೆಂಬಲ ವಾಪಸ್ ತಗೊಂಡಿದ್ದಾರೆ. 12 ಜನ ಶಾಸಕರು ರಾಜೀನಾಮೆ ನೀಡಲ್ಲ. ಇದೆಲ್ಲ ಬರೀ ಆಟ ಅಷ್ಟೇ ಎಂದರು.
Advertisement
ರಾಜೀನಾಮೆ ಕೊಡುವವರು ಯಾವ ಪುರುಷಾರ್ಥಕ್ಕೆ ರಾಜೀನಾಮೆ ಕೊಡಬಲ್ಲರು? ರಾಜ್ಯದಲ್ಲಿ ಅತಂತ್ರ ಸ್ಥಿತಿ ಬರುತ್ತದೆ. ಮೋದಿ ಕೂಡ ಸಮ್ಮಿಶ್ರ ಸರ್ಕಾರದಲ್ಲಿಯೇ ಅಧಿಕಾರ ನಡೆಸುತ್ತಿದ್ದಾರೆ. ಅವರ ಹಿಂದೆಯೂ ಅನೇಕ ಪಕ್ಷಗಳಿವೆ ಎಂದು ಹೇಳಿದರು.
Advertisement
Advertisement
ಬಿಜೆಪಿಗೆ ಈಗ ಅಧಿಕಾರ ಏತಕ್ಕೆ ಬೇಕು, ವಿರೋಧ ಪಕ್ಷದಲ್ಲಿದ್ದು ಚೆನ್ನಾಗಿ ಕೆಲಸ ಮಾಡಿ ಮುಂದೆ ಅಧಿಕಾರಕ್ಕೆ ಬರಬಹುದು. ಈಗ ಇಂತಹ ಕೆಲಸ ಮಾಡಿ, ಚುನಾವಣೆಗೆ ಹೋಗಿ ಆರೂವರೆ ಕೋಟಿ ಜನರ ತಲೆ ಮೇಲೆ ಭಾರ ಹಾಕುವುದು ಸರಿಯಲ್ಲ ಎಂದರು.
Advertisement
ಕುಮಾರಸ್ವಾಮಿ ಏನಾದರೂ ಬಹುಮತ ಸಾಬೀತು ಮಾಡುತ್ತೇನೆ ಎಂದರೆ ಇವರು ಏನು ಮಾಡ್ತಾರೆ. ನಮ್ಮ ಸರ್ಕಾರ ಉಳಿಸಬೇಕಿದೆ. ಅದಕ್ಕಾಗಿ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ಯಾರೂ ಬಿಟ್ಟು ಹೋಗಬಾರದು. ಪುನಃ ಅತಂತ್ರವಾಗಬಾರದು ಸಾಧ್ಯವಾದಷ್ಟು ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೊರಟ್ಟಿ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv