ಮಗಳ ನಾಮಿನೇಷನ್‌ಗೆ ಯಾರೂ ಬರಬೇಡಿ: ಸತೀಶ್ ಜಾರಕಿಹೊಳಿ

Public TV
1 Min Read
SATHISH JARAKIHOLI

ಬೆಳಗಾವಿ: ಮಗಳ ನಾಮಿನೇಷನ್ ಸಿಂಪಲ್ ಆಗಿ ಮಾಡ್ತೀನಿ. ಯಾರೂ ಬರಬೇಡಿ‌. ಜನ ಸೇರುವುದು ಬೇಡ, ಕಾರ್ಯಕರ್ತರು ಬರೋದು ಬೇಡ ಎಂದು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ (Satish Jarakiholi) ಹೇಳಿದರು.

ಈ ಕುರಿತು ವೀಡಿಯೋ ಮೂಲಕ ಕಾರ್ಯಕರ್ತರಲ್ಲಿ ಮನವಿ ಮಾಡಿದ ಸತೀಶ್‌, ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ವೈಯಕ್ತಿಕ ಟೀಕೆ ಮಾಡಬೇಡಿ. ಪ್ರವಾಹದ ಸಂದರ್ಭದಲ್ಲಿ ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ವಿದೇಶದಲ್ಲಿದ್ದರು ಎಂದು ಟ್ರೋಲ್ ಮಾಡಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ವೈಯಕ್ತಿಕ ಟೀಕೆ ಮಾಡಬೇಡಿ. ಕೇವಲ ರಾಜಕೀಯ ಆರೋಪಗಳಿಗೆ ಮಾತ್ರ ಸೀಮಿತವಾಗಿರಲಿ ಅವರ ವೈಫಲ್ಯ ಹೇಳುವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳನ್ನು ಪೋಸ್ಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಪ್ರಧಾನಿಯಾಗ್ಬೇಕೆಂದು ಕಾಳಿ ಮಾತೆಗೆ ತನ್ನ ಬೆರಳನ್ನೇ ಅರ್ಪಿಸಿದ ಅಭಿಮಾನಿ

Share This Article