– ದರ್ಶನ್ ಶ್ಯೂರಿಟಿ ಕೊಟ್ಟು ಮಗನನ್ನು ಬಿಡಿಸಬೇಕು
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ (Renukaswamy Murder Case) ‘ಡಿ’ ಗ್ಯಾಂಗ್‌ನೊಂದಿಗೆ ಅಂದರ್ ಆಗಿರುವ ಎ6 ಜಗದೀಶ್‌ಗೆ ಜಾಮೀನು (Bail) ಸಿಕ್ಕರೂ ಸಹ ಈವರೆಗೆ ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಹೀಗಾಗಿ ವಯಸ್ಸಾದ ಜಗದೀಶ್ ತಾಯಿ ಸುಲೋಚನಮ್ಮ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮಗನ ಬೇಲ್‌ಗಾಗಿ ಜಾಮೀನುದಾರರನ್ನು ಒದಗಿಸಲಾಗದೇ ಸುಲೋಚನಮ್ಮ ಕಂಗಾಲಾಗಿದ್ದಾರೆ.
ಈ ವೇಳೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕೋರ್ಟ್ ಮಗನ ಬಿಡುಗಡೆಗಾಗಿ ಇಬ್ಬರು ಜಾಮೀನುದಾರರನ್ನು ಕೇಳಿದೆ. ಆದರೆ ಜಗದೀಶ್‌ಗೆ ಜಾಮೀನು ನೀಡಲು ಸ್ನೇಹಿತರು ಹಾಗೂ ಸಂಬಂಧಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಭಿಮಾನದಿಂದ ನಟರನ್ನು ನಂಬಿ ಯಾರೂ ಮೋಸಹೋಗಬಾರದು. ನನ್ನ ಮಗ ದರ್ಶನ್ ನಂಬಿ ಹೋಗಿ ಜೈಲುಸೇರಿದ್ದಾನೆ. ಮುಂದೆ ಯಾವ ಯುವಕರು ಸಹ ಇಂಥವರನ್ನು ನಂಬಿ ಮೋಸಹೋಗಬಾರದು. ಈವರೆಗೆ ದರ್ಶನ್ (Darshan) ಅವರಿಂದ ಯಾವ ಸಹಾಯವು ಆಗಿಲ್ಲ ಎಂದು ಮನನೊಂದ ಜಗದೀಶ್ ತಾಯಿ ಸುಲೋಚನಮ್ಮ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ
ನಟ ದರ್ಶನ್ ಅವರನ್ನು ನಂಬಿ ನನ್ನ ಮಗ ಹೋಗಿದ್ದಾನೆ. ಅವರೇ ಬಿಡುಗಡೆ ಮಾಡಿಸಬೇಕು. ಜೊತೆಗೆ ಬೆಂಗಳೂರಿನ ವಕೀಲರು ನಮ್ಮ ಪರಿಸ್ಥಿತಿ ಅರ್ಥೈಸಿಕೊಂಡು ವಾದ ಮಂಡಿಸಿ ಬೇಲ್ ಕೊಡಿಸಿದ್ದಾರೆ. ಹೀಗಾಗಿ ನಟ ದರ್ಶನ್ ಅವರು ಶ್ಯೂರಿಟಿ ಕೊಟ್ಟು ನನ್ನ ಮಗನನ್ನು ಬಿಡಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್