ಮೈಸೂರು: ರಾಜಮಹಾರಾಜರ ಕಾಲದಿಂದಲೂ ಮೈಸೂರು (Mysuru Lok Sabha) ವಿಶ್ವವಿಖ್ಯಾತಿ ಪಡೆದಿದೆ. ಘಟಾನುಘಟಿ ನಾಯಕರು ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಆದರೆ ಮೈಸೂರಿನಿಂದ ಗೆದ್ದವರು ಈವರೆಗೆ ಕೇಂದ್ರದಲ್ಲಿ ಮಂತ್ರಿಯಾಗಲು ಸಾಧ್ಯವಾಗಿಲ್ಲ.
ಮೈಸೂರು ಲೋಕಸಭಾ ಕ್ಷೇತ್ರ 1952 ರಿಂದಲೂ ಅಸ್ತಿತ್ವದಲ್ಲಿದೆ. ಕಾಂಗ್ರೆಸ್‌ನ ಎಸ್.ಎಂ.ಸಿದ್ದಯ್ಯ ಸತತ ನಾಲ್ಕು ಬಾರಿ ಗೆದ್ದರೂ ಮಂತ್ರಿಯಾಗಲಿಲ್ಲ. ಹೆಚ್.ಡಿ.ತುಳಸಿದಾಸ್ ಅವರು ಸತತ ಮೂರು ಬಾರಿ ಗೆದ್ದರೂ ಮಂತ್ರಿಯಾಗಲಿಲ್ಲ. ಆದರೆ ಅವರ ತಂದೆ ಹೆಚ್.ಸಿ.ದಾಸಪ್ಪ 1952 ರಲ್ಲಿ ಮೈಸೂರಿನಲ್ಲಿ ಸೋತಿದ್ದರು. ನಂತರ ಅವರು ಎರಡು ಬಾರಿ ಬೆಂಗಳೂರಿನಿಂದ ಗೆದ್ದು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದರು. ಇದನ್ನೂ ಓದಿ: ಕಡಿಮೆ ಅಂತರದ ಗೆಲುವು-ಸೋಲು ಕಂಡ ‘ಧೃವ’ ತಾರೆ! ಹ್ಯಾಟ್ರಿಕ್ ಮಿಸ್ ಮಾಡಿಕೊಂಡಿದ್ದ ಧೃವನಾರಾಯಣ್
Advertisement
ಒಡೆಯರ್ 1984, 1989 ರಲ್ಲಿ ಸತತ ಎರಡು ಬಾರಿ ಗೆದ್ದರೂ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ. ಮೊದಲ ಬಾರಿ ಸದಸ್ಯರು ಎಂಬ ಕಾರಣದಿಂದ 1984 ರಲ್ಲಿ ಅವಕಾಶ ಸಿಗಲಿಲ್ಲ. ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದರೇ ಮಂತ್ರಿಯಾಗಬಹುದು ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1991 ರಲ್ಲಿ ಬಿಜೆಪಿ ಸೇರಿ ಅಭ್ಯರ್ಥಿಯಾಗಿ ಸೋತರು.
Advertisement
Advertisement
ಮತ್ತೆ ಕಾಂಗ್ರೆಸ್‌ಗೆ ವಾಪಸ್ ಆಗಿ 1996 ಹಾಗೂ 1999 ರಲ್ಲಿ ಗೆದ್ದರೂ ಆಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ. 1996 ರಲ್ಲಿ ಮೊದಲ ಹನ್ನೊಂದು ತಿಂಗಳು ಹೆಚ್.ಡಿ.ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಸರ್ಕಾರ, ನಂತರ ಐ.ಕೆ.ಗುಜ್ರಾಲ್ ನೇತೃತ್ವದ ಸರ್ಕಾರ, 1999 ರಲ್ಲಿ ಎ.ಬಿ.ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ. ಹೀಗಾಗಿ ಒಡೆಯರ್ ನಾಲ್ಕು ಬಾರಿ ಗೆದ್ದರೂ ಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯ ಇದ್ದರು ಒಮ್ಮೆಯೂ ಗೆದ್ದಿಲ್ಲ ಜನತಾ ಪರಿವಾರ – ಜನತಾ ಪರಿವಾರದ ಸೋಲಿನ ಚರಿತ್ರೆ