ಧಾರವಾಡ: ಉಡುಪಿ ಹಾಗೂ ಮಂಗಳೂರಿನವರು ಪೊಲೀಸ್ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ನೌಕರಿಗೆ ಸೇರೋದಿಲ್ಲ. ಬದಲಾಗಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಾರೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ನಡೆದ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಉಡುಪಿ ಮತ್ತು ಮಂಗಳೂರು ಭಾಗದವರು ಪೊಲೀಸ್ ಪೇದೆ ಅಥವಾ ಪಿಎಸ್‍ಐ ಕೋರ್ಸ್ ಗೆ ಸೇರೋದಿಲ್ಲ. ಯಾಕಂದ್ರೆ ಪೊಲೀಸ್ ಇಲಾಖೆ ಎಂಬುದು ಅತ್ಯಂತ ಕಠಿಣವಾದ ಕೆಲಸ ಅಂತ ಅವರಿಗೆ ಗೊತ್ತಿದೆ. ಹೀಗಾಗಿ ಅವರು ವ್ಯಾಪಾರ ಮಾಡಿಕೊಂಡು ಅಥವಾ ಬೇರೆ ದೇಶಕ್ಕೆ ಅಂದ್ರೆ ಗಲ್ಫ್ ರಾಷ್ಟ್ರಗಳಿಗೆ ತೆರಳಿ ಉದ್ಯೋಗ ಮಾಡುತ್ತಾರೆ ಎಂದು ಅವರು ತಿಳಿಸಿದ್ರು.
Advertisement
Advertisement
ನಾವು ಬೇರೆ ಇತರ ಯಾವುದೇ ಇಲಾಖೆಗೆ ಹೋಲಿಕೆ ಮಾಡಿದಾಗ ಅಲ್ಲಿ ಉದ್ಯೋಗಿಗಳು ನಿರ್ಧಿಷ್ಟ ಅವಧಿಗೆ ಕೆಲಸ ಮಾಡುತ್ತಾರೆ. ಅವರಿಗೆಲ್ಲ ರಜೆಗಳು ಸಿಗುತ್ತವೆ. ನಾವು ದೀಪಾವಳಿ ಆಚರಿಸಿದ್ರೆ, ಮುಸ್ಲಿಮರು ರಂಜಾನ್ ಆಚರಿಸುತ್ತಾರೆ. ನಾವು ನಮ್ಮ ಹಬ್ಬಗಳನ್ನು ಆಚರಣೆ ಮಾಡುತ್ತಿರುತ್ತೇವೆ. ಆದ್ರೆ ಈ ಹಬ್ಬಗಳ ದಿನದಂದು ಪೊಲೀಸ್ ಇಲಾಖೆಯವರು ವಿಶೇಷವಾಗಿ ಬಹಳ ಜಾಗ್ರತೆಯಿಂದ ಕೆಲಸ ನಿರ್ವಹಿಸಬೇಕಾಗುತ್ತದೆ. ಪಾಪ ಪೊಲೀಸರಿಗೆ ಹಬ್ಬ ಇಲ್ಲ ಅಂದ್ರು.
Advertisement
Advertisement
ಅನೇಕ ಜನರು ಅವರವರ ಕುಟುಂಬದ ಕಾರ್ಯಕ್ರಮಗಳಲ್ಲಿರುತ್ತಾರೆ. ಪೊಲೀಸ್ ನವರಿಗೂ ಕುಟುಂಬ ಇರುತ್ತದೆ. ಹೆಂಡ್ತಿ-ಮಕ್ಕಳಿರುತ್ತಾರೆ. ಹೀಗಾಗಿ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ. ಆದ್ರೆ ಅದು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಹಬ್ಬದ ದಿನಗಳಲ್ಲಿಯೇ ಗಲಭೆಕೋರರು, ದುಷ್ಕರ್ಮಿಗಳು ತಮ್ಮ ಕೆಲಸ ಮಾಡುತ್ತಾರೆ. ಹೀಗಾಗಿ ಪೊಲೀಸರಿಗೆ ಹಬ್ಬಗಳೇ ಇಲ್ಲವಾಗಿ ಹೋಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv