ನವದೆಹಲಿ: ನ್ಯಾಷನಲ್ ಹೆರಾಲ್ಡ್(National Herald) ಕೇಸ್ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(DK Shivakumar) ಇಂದು ಜಾರಿ ನಿರ್ದೇಶನಾಲಯ(Enforcement Directorate) ವಿಚಾರಣೆ ಎದುರಿಸಿದ್ದಾರೆ.
ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಡಿಕೆ ಶಿವಕುಮಾರ್ ಕೆಲವೊಂದು ದಾಖಲೆ ಸಲ್ಲಿಸಲು ಮೂರು ದಿನ ಕಾಲಾವಕಾಶ ಪಡೆದಿದ್ದಾರೆ. ಇದನ್ನೂ ಓದಿ: ಬಲವಂತದ ಮತಾಂತರ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು : ಸುಪ್ರೀಂ ಕೋರ್ಟ್
Advertisement
Advertisement
ವಿಚಾರಣೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ಜೊತೆ ವ್ಯವಹರಿಸುತ್ತಿದ್ದವರನ್ನು ಇಡಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಇದರಿಂದ ನನ್ನ ಜೊತೆ ಬಿಸಿನೆಸ್ ಮಾಡಲು ಯಾರೂ ಕೂಡ ಮುಂದೆ ಬರುತ್ತಿಲ್ಲ. ನನ್ನ ಪೋನ್ ರಿಸೀವ್ ಮಾಡಲು ಸಹ ಭಯಪಡುತ್ತಿದ್ದಾರೆ. ನನಗೆ ಸಾಲು ಸಾಲು ವಿಚಾರಣೆಗಳಿದ್ದು, ನಮ್ಮ ಗೋಳು ಮತ್ತು ಕಷ್ಟ ನಿಮ್ಮ ಬಳಿ ಹೇಳಿಕೊಂಡರೆ ಏನು ಪ್ರಯೋಜನವಿಲ್ಲ ಎಂದಿದ್ದಾರೆ.
Advertisement
ಬಿಜೆಪಿ ಸೇರಲು ಒತ್ತಡ ಇದ್ಯೆ ಎಂಬ ಪ್ರಶ್ನೆಗೆ ಈಗ ಆ ವಿಚಾರ ಬಹಿರಂಗ ಮಾಡುವುದು ಸರಿಯಲ್ಲ. ಇದನ್ನೆಲ್ಲಾ ಫೇಸ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.