ಡಿಕೆಶಿ ವಾರ್ನಿಂಗ್‌ಗೆ ಹೆದರೋರು ಯಾರೂ ಇಲ್ಲ: ನಿಖಿಲ್ ಕುಮಾರಸ್ವಾಮಿ

Public TV
2 Min Read
Nikhil Kumaraswamy 1

ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ವಾರ್ನಿಂಗ್‌ಗೆ ಯಾರೂ ಹೆದರಿ ಕೂರೋದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿನಿಮಾ ನಟರಿಗೆ ಡಿಕೆ ಶಿವಕುಮಾರ್ ವಾರ್ನಿಂಗ್ ಕೊಟ್ಟ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಹೇಳಿಕೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಡಿಕೆಶಿ ಹೇಳಿಕೆ ಕಲಾವಿದರು, ನಿರ್ಮಾಪಕ, ನಿರ್ದೇಶಕರು, ಟೆಕ್ನೀಷನ್ಸ್‌ಗಳ ಮನಸಿಗೆ ನೋವಾಗಿದೆ. ಕಲಾವಿದರು ಬಹಳ ಸೂಕ್ಷ್ಮ ಸ್ವಭಾವದ ವ್ಯಕ್ತಿಗಳು. ಡಾ.ರಾಜ್‌ಕುಮಾರ್ ಹೋರಾಟ ಮಾಡಿದಾಗ ಇಡೀ ಚಿತ್ರರಂಗ ಭಾಗಿಯಾಗಿತ್ತು. ಯಾರು ಹೋರಾಟಕ್ಕೆ ಕೈ ಜೋಡಿಸಲ್ಲ ಎಂದು ಹೇಳಿರಲಿಲ್ಲ. ಕಾಂಗ್ರೆಸ್ (Congress) ಅವರು ಚುನಾವಣೆ ಸಮಯದಲ್ಲಿ ಈ ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಅದು ರಾಜಕೀಯ ಪ್ರೇರಿತ ಪಾದಯಾತ್ರೆ. ರಾಜಕೀಯ ಪಾದಯಾತ್ರೆಯಲ್ಲಿ ಭಾಗವಹಿಸೋದು ಸೂಕ್ತ ಅಲ್ಲ ಎಂದು ನಟರು ಭಾಗಿಯಾಗಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ಯಾರಿಗೂ ನೀವು ಕಟ್ಟುನಿಟ್ಟಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಎಂದು ತಾಕೀತು ಮಾಡಿದ್ರೂ ಯಾರು ಕೇಳೋರು ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಡಿಸಿಎಂಗೆ ಜವಾಬ್ದಾರಿ ಇದೆ: ಡಿಕೆಶಿ ನಟ್ಟು, ಬೋಲ್ಟು ಹೇಳಿಕೆಗೆ ಹೇಮಾ ಚೌಧರಿ ರಿಯಾಕ್ಷನ್

ರಾಜ್ಯದಲ್ಲಿ ಸಾಕಷ್ಟು ಸರ್ಕಾರಗಳು ಬಂದು ಹೋಗಿವೆ. ರಾಜ್ಯದ ಜನ ಅನೇಕ ಸಿಎಂಗಳನ್ನ ನೋಡಿದ್ದಾರೆ. ಆದರೆ ಇಂತಹ ಹೇಳಿಕೆ ಯಾರೂ ಕೊಟ್ಟಿಲ್ಲ. ಹೀಗೆ ಮಾತಾಡಿ ಕಲಾವಿದರನ್ನ ಪ್ರಚೋದನೆ ಮಾಡೋದು ಸರಿಯಲ್ಲ. ಅವರ ವಾರ್ನಿಂಗ್‌ಗೆ ಯಾರೂ ಹೆದರಿ ಕೂರೋದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಂಭಮೇಳದಲ್ಲಿ ನಾನು ಭಾಗಿಯಾದರೆ ತಪ್ಪೇನಿದೆ: ಸ್ವಪಕ್ಷದ ನಾಯಕರಿಗೆ ಡಿಕೆಶಿ ಟಾಂಗ್

ಸ್ವಾಭಿಮಾನಕ್ಕೆ ಧಕ್ಕೆ ಆದ ಸಮಯದಲ್ಲಿ ಕಲಾವಿದರು ಹೊರಗೆ ಬಂದು ಮುಂದಿನ ದಿನಗಳಲ್ಲಿ ಮಾತನಾಡುತ್ತಾರೆ. ಕಲಾವಿದರು ಗೌರವದ ಬದುಕು ಕಟ್ಟಿಕೊಂಡಿದ್ದಾರೆ. ಕಷ್ಟಪಟ್ಟು ಸಿನಿಮಾ ಮಾಡುತ್ತಾರೆ. ಸಾಲ ಮಾಡಿ ಸಿನಿಮಾ ಮಾಡುತ್ತಾರೆ. ಕಲಾವಿದರ ಮೇಲೆ ದಬ್ಬಾಳಿಕೆ, ದೌರ್ಜನ್ಯದ ಮಾತು ಆಡೋದು ರಾಜ್ಯದ ಜನತೆ ಸಹಿಸೋದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕದನ ವಿರಾಮ ಅಂತ್ಯ – ಗಾಜಾ ಅಗತ್ಯ ನೆರವಿಗೆ ತಡೆ ನೀಡಿದ ಇಸ್ರೇಲ್

Share This Article