ಸಿಯೋಲ್/ಪ್ಯೋಂಗ್ಯಾಂಗ್: ಉತ್ತರ ಕೊರಿಯಾದ (North Korea) ನಾಯಕ ಕಿಮ್ ಜಾಂಗ್ ಉನ್ (Kim Jong Un) ತನ್ನ ಮಗಳ (Daughter) ಹೆಸರನ್ನು (Name) ದೇಶದ ಯಾವುದೇ ಇತರ ಹುಡುಗಿಯರು ಹೊಂದುವಂತಿಲ್ಲ ಎಂದು ಆದೇಶಿಸಿರುವುದಾಗಿ ವರದಿಗಳು ತಿಳಿಸಿವೆ.
ಕಿಮ್ ಜಾಂಗ್ ಉನ್‌ರ ಮಗಳ ಹೆಸರು ‘ಕಿಮ್ ಜು-ಏ’ (Kim Ju Ae) ಆಗಿದ್ದು ಆಕೆಗೆ 9 ವರ್ಷ ಎನ್ನಲಾಗಿದೆ. ಇದೀಗ ಉತ್ತರ ಕೊರಿಯಾದ ನಾಯಕ ತನ್ನ ಮಗಳಂತೆಯೇ ಹೆಸರನ್ನು ಯಾವೊಬ್ಬ ವ್ಯಕ್ತಿಯೂ ಹೊಂದುವಂತಿಲ್ಲ. ಒಂದು ವೇಳೆ ಹೊಂದಿದ್ದರೆ, ಅದನ್ನು ಬದಲಿಸಿಕೊಳ್ಳುವಂತೆ ಆದೇಶಿಸಲಾಗಿದೆ. ಜು-ಏ ಹೆಸರಿರುವ ಹುಡುಗಿಯರು ತಮ್ಮ ಜನನ ಪ್ರಮಾಣಪತ್ರಗಳನ್ನು ಒಂದು ವಾರದೊಳಗೆ ಬದಲಾಯಿಸಿಕೊಳ್ಳುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಈ ಹಿಂದೆ ಉತ್ತರ ಕೊರಿಯಾ ತನ್ನ ನಾಯಕರು ಹಾಗೂ ಅವರ ಹತ್ತಿರದ ಕುಟುಂಬದ ಸದಸ್ಯರು ಹೊಂದಿರುವ ಹೆಸರುಗಳನ್ನು ಅಲ್ಲಿನ ಪ್ರಜೆಗಳು ಬಳಸುವುದನ್ನು ನಿಲ್ಲಿಸಿದೆ ಎಂದು 2014ರಲ್ಲಿ ವರದಿಯಾಗಿತ್ತು. ನಾಯಕ ಕಿಮ್ ಜಾಂಗ್ ಉನ್ ಹೆಸರನ್ನು ಬಳಸದಂತೆ ಜನರನ್ನು ಒತ್ತಾಯಿಸಲಾಗಿತ್ತು. ಇದನ್ನೂ ಓದಿ: ಲವ್ವರ್ ಹತ್ಯೆಗೂ ಮುನ್ನ ಗೆಳೆಯರ ಜೊತೆ ಎಂಗೇಜ್ಮೆಂಟ್ ಪಾರ್ಟಿ ಮಾಡಿದ್ದ ಕೊಲೆಗಡುಕ!
Advertisement
ಕಿಮ್ ಜಾಂಗ್ ಉನ್‌ರ ಮಗಳು ಕೆಲ ತಿಂಗಳ ಹಿಂದಷ್ಟೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಳು. ಇತ್ತೀಚೆಗೆ ಪ್ಯೊಂಗ್ಯಾಂಗ್‌ನಲ್ಲಿ ನಡೆದ ಬೃಹತ್ ಮಿಲಿಟರಿ ಪರೇಡ್‌ನಲ್ಲಿ ಆಕೆ ತನ್ನ ತಂದೆಯೊಂದಿಗೆ ಕಾಣಿಸಿಕೊಂಡಿದ್ದಳು. ಆಕೆಯ ಫೋಟೋಗಳು ಬಿಡುಗಡೆಯಾಗಲಿರುವ ಅಂಚೆ ಚೀಟಿಗಳಲ್ಲೂ ಕಾಣಿಸಿಕೊಂಡಿದೆ. ಇದು ಕಿಮ್ ಜಾಂಗ್ ಉನ್‌ರ ಉತ್ತರಾಧಿಕಾರವನ್ನು ಆಕೆ ವಹಿಸಿಕೊಳ್ಳಲಿದ್ದಾಳೆ ಎಂಬ ಊಹಾಪೋಹಕ್ಕೂ ಕಾರಣವಾಗಿದೆ.
Advertisement
ಕಿಮ್ ಜಾಂಗ್ ಉನ್‌ಗೆ ಮೂವರು ಮಕ್ಕಳಿದ್ದು, ಅದರಲ್ಲಿ ಕಿಮ್ ಜು-ಏ ಮಾತ್ರವೇ ಇಲ್ಲಿಯವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಳೆ. ಇದನ್ನೂ ಓದಿ: ಸೆಲ್ಫಿ ಕೊಡದಿದ್ದಕ್ಕೆ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ಕಾರಿನ ಮೇಲೆ ಅಟ್ಯಾಕ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k