ಕಲಬುರಗಿ: ಬಿಜೆಪಿ (BJP) ಮತ್ತು ಕಾಂಗ್ರೆಸ್‌ನಲ್ಲಿ (Congress) ಘರ್ ವಾಪ್ಸಿ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಅಧಿಕೃತವಾಗಿ ಯಾರು ಕೂಡಾ ಪಾರ್ಟಿ ಬಿಟ್ಟು ಹೋಗುತ್ತೇನೆ ಎಂದು ಹೇಳಿಲ್ಲ. ನನಗೂ ಯಾವುದೇ ಕರೆ ಬಂದಿಲ್ಲ ಎಂದು ಸಂಸದ ಉಮೇಶ್ ಜಾಧವ್ (Umesh Jadhav) ಹೇಳಿದ್ದಾರೆ.
ಎಸ್‌ಟಿ ಸೋಮಶೇಖರ್ (ST Somashekhar) ಬಿಜೆಪಿಯಲ್ಲಿ ಅಸಮಾಧಾನ ವಿಚಾರವಾಗಿ ಕಲಬುರಗಿಯಲ್ಲಿ (Kalaburagi) ಮಾತನಾಡಿದ ಉಮೇಶ್ ಜಾಧವ್, ರಾಜಕೀಯ ಪಕ್ಷದಲ್ಲಿ ಒಂದು ಪಾರ್ಟಿಯಿಂದ ಇನ್ನೊಂದು ಪಾರ್ಟಿ ಸೇರಿದಾಗ ಹಳೆ ಕಾರ್ಯಕರ್ತರ ಮಧ್ಯೆ ಅಸಮಾಧಾನ ಇರುತ್ತದೆ. ಅದೆಲ್ಲಾ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಎಸ್‌ಟಿ ಸೋಮಶೇಖರ್‌ಗೆ ಯಡಿಯೂರಪ್ಪ, ಬೊಮ್ಮಾಯಿ ಕರೆದು ಮಾತನಾಡಿ ಸಮಜಾಷಿ ಹೇಳಿದ್ದಾರೆ ಎಂದು ತಿಳಿಸಿದರು.
Advertisement
Advertisement
ನಾನು ಮುಂಬೈ ಟೀಮ್‌ನಲ್ಲಿ ಮೊದಲಿನಿಂದಲು ಇಲ್ಲ. ನಾವು ಮುಂಬೈ ಟೀಮ್ ಎಂದು ಯೂನಿಟಿ ಮಾಡಿಲ್ಲ. ನಾವು ಯಡಿಯೂರಪ್ಪ ಟೀಮ್‌ನಲ್ಲಿ ಇದ್ದೀವಿ. ಮುಂಬೈ ಟೀಮ್‌ನಲ್ಲಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಅಂದ್ರೆ ನಮಗೆ ಭಯ – ಸತೀಶ್ ಜಾರಕಿಹೊಳಿ
Advertisement
Advertisement
ಪಾರ್ಟಿಯಿಂದ ಲೀಡರ್ ಹೊರ ಹೋದರೂ ಮತದಾರರು ಹೋಗೋದಿಲ್ಲ. ಬಿಜೆಪಿ ಮತ್ತೊಮ್ಮೆ 25 ಸೀಟ್ ಗೆಲ್ಲುವ ವಿಶ್ವಾಸ ಇದೆ. ಚುನಾವಣೆ ಬಂದಾಗ ಎಲ್ಲಾ ಪಾರ್ಟಿಯವರು ಬೇರೆ ಬೇರೆ ಲೀಡರ್‌ಗಳನ್ನು ಕರೆತರುವ ಪ್ರಯತ್ನ ನಡೆಯುತ್ತದೆ. ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ ರಿವರ್ಸ್ ಘರ್ ವಾಪ್ಸಿ ನಮ್ಮ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ನಿಖಿಲ್‌ಗೆ ಬದುಕಲು ಹಲವು ಮಾರ್ಗಗಳಿವೆ; ರಾಜಕೀಯದಿಂದ ಬದುಕುವ ಅವಶ್ಯಕತೆ ಇಲ್ಲ: ಹೆಚ್‌ಡಿಕೆ
Web Stories