ಬೆಂಗಳೂರು: ಏನೇ ಅದರೂ ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುನರುಚ್ಚರಿಸಿದ್ದಾರೆ.
Advertisement
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಅಲ್ಲ ದೇಶದಲ್ಲಿ ಹೋರಾಟ ಮಾಡಲಿ. ಮಂತ್ರಿ ನುಡಿಮುತ್ತುಗಳನ್ನಾಡಿದ್ದಾರೆ. ಸಿಎಂ ಬಿಜೆಪಿ ಅಧ್ಯಕ್ಷ, ಅಶೋಕ್ ಅವರ ಎಲ್ಲಾ ಮಾತುಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಾವು ಅವರ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಅವರು ನಮ್ಮ ಮೇಲೆ ನೂರು ಕೇಸ್ ಹಾಕಿದರು ನಾವು ಪಾದಯಾತ್ರೆ ಮಾಡೇ ಮಾಡ್ತೀವಿ. ಬಿಜೆಪಿ ಅವರ ಸಂಸ್ಕೃತಿ ಅನಾವಣರ ಆಗಿದೆ. ಅವರ ವಿಶ್ವರೂಪ ದರ್ಶನ ಆಗಿದೆ ಮೇಕೆದಾಟು ಪಾದಯಾತ್ರೆ ವಾಪಸ್ ಪಡೆಯಲು ಸುಧಾಕರ್ ಮನವಿ ಮಾಡಿದ್ದಾರೆ. ಬಹಳ ಸಂತೋಷ. ಆದರೆ ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ. ಇದನ್ನೂ ಓದಿ: ರಾಮನಗರಕ್ಕೂ ಸಚಿವರಿಗೂ ಏನು ಸಂಬಂಧ? – ಡಿಕೆಶಿ ಪ್ರಶ್ನೆಗೆ ಉತ್ತರ ನೀಡಿದ ಅಶ್ವಥ್ ನಾರಾಯಣ್
Advertisement
Advertisement
ನಾವು ಪಾದಯಾತ್ರೆ ಮಾಡಿದ್ರೆ ಮಾತ್ರ ಕೊರೊನಾ ಬರುತ್ತಾ?. ಜನರಿಗೆ ತೊಂದರೆ ಆಗ್ತಾ ಇದೆ ಮೊದಲು ಅದನ್ನು ನೋಡಿ. ಕೊರೊನಾ ಸ್ಫೋಟವಾದರೆ ಕಾಂಗ್ರೆಸ್ ಹೊಣೆ ಎಂದು ಸುಧಾಕರ್ ಹೇಳಿದ್ದಾರೆ. ಈಗಾಗಲೇ ನಮ್ಮ ವಿರುದ್ಧ ಕೇಸ್ ಕೂಡ ಹಾಕಿದ್ದಾರೆ. ಆದರೆ ಬಿಜೆಪಿಯವರು ಮೆರವಣಿಗೆ ಮಾಡಿದ್ದಾರಲ್ಲ ಏಕೆ ಅವರ ವಿರುದ್ಧ ಕೇಸ್ ಮಾಡಿಲ್ಲ? ಸಿಎಂ ವಿರುದ್ಧ ಕೇಸ್ ಹಾಕಲಿ ಮೊದಲು. ಸುಧಾಕರ್, ಏರ್ಪೋರ್ಟ್ನಲ್ಲಿ ಹರಾಸ್‍ಮೆಂಟ್ ನಡಿತಾ ಇದೆ. ಊಟ ಹೋಟೆಲ್ ಎಲ್ಲಾ ಅಡ್ಜಸ್ಟ್ಮೆಂಟ್ ಮಾಡ್ಕೋತಾ ಇದ್ದಾರೆ ಮೊದಲು ಅದನ್ನು ಸರಿಪಡಿಸಲಿ ಎಂದು ವಾಗ್ದಾಳಿ ನಡೆಸಿದರು.
Advertisement
ರಿಪಬ್ಲಿಕ್ ಆಫ್ ರಾಮನಗರ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಜನ ಅಲ್ಲಿದ್ದಾರೆ. ಅವರು ಉತ್ತರ ಕೊಡುತ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ: ಎಚ್‍ಡಿಕೆ ಕಿಡಿ