ಚಿರು ಜಾಗ ತುಂಬುವುದಕ್ಕೆ ರಾಯನ್‍ಗೂ ಸಾಧ್ಯವಿಲ್ಲ: ಮೇಘನಾ ರಾಜ್

Public TV
1 Min Read
Meghana Raj Chiranjeevi Sarja

– ನಮ್ಮ ಕುಟುಂಬ ಮಾತ್ರವಲ್ಲ ಚಿರುನಾ ಯಾರು ಮರೆಯಲ್ಲ

ಚಂದನವನದ ಹೆಸರಾಂತ ನಟ ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ ಎರಡು ವರ್ಷ. ಚಿರು ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಇಂದು ಧ್ರುವ ಫಾರ್ಮ್ ಹೌಸ್‍ನಲ್ಲಿರುವ ಚಿರು ಸಮಾಧಿಗೆ ಪೂಜೆ ಸಲ್ಲಿಸಿ, ಎರಡನೇ ವರ್ಷದ ಕಾರ್ಯ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದನವನದ ನಟಿ, ಚಿರು ಪತ್ನಿ ಮೇಘನಾ ರಾಜ್ ಭಾವನ್ಮಾಕವಾಗಿ ಮಾತನಾಡಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

Meghana Raj Chiranjeevi Sarja 1

ಮೇಘನಾ ಹೇಳಿದ್ದೇನು?
ನಾನು ಚಿರುನ ಹೇಗೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾತಿನಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಅದು ಎಲ್ಲರಿಗೂ ಗೊತ್ತಿದೆ. ಆ ಜಾಗವನ್ನು ಯಾರು ತುಂಬುವುದಕ್ಕೆ ಸಾಧ್ಯವಿಲ್ಲ. ಚಿರು ಜಾಗ ತುಂಬುದಕ್ಕೆ ರಾಯನ್‍ಗೂ ಸಾಧ್ಯವಿಲ್ಲ. ಅದು ಅವರಿಂದ ಮಾತ್ರ ಸಾಧ್ಯ. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ

meghana raj

ಇಂದು ನಾನು ಒಂದು ವಿಷಯ ಹೇಳುವುದಕ್ಕೆ ಇಷ್ಟಪಡುತ್ತೇನೆ. 2 ವರ್ಷ ಅಲ್ಲ, ಇನ್ನೂ ನೂರಾರು ವರ್ಷ ಹೋದ್ರೂ ಚಿರುನಾ ನಮ್ಮ ಕುಟುಂಬ ಮಾತ್ರವಲ್ಲ, ಯಾರಿಂದಲೂ ಮರೆಯುವುದಕ್ಕೆ ಸಾಧ್ಯವಿಲ್ಲ. ನಾವು ಮಾತ್ರವಲ್ಲ ಮಾಧ್ಯಮಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಚಿರುನನ್ನು ಮರೆಯಲು ಸಾಧ್ಯವಿಲ್ಲ.

meghana raj 1

ಇಂದು ಅವರಿಗೋಸ್ಕರ ಬಂದು, ಅವರನ್ನು ದೇವರ ಸ್ಥಾನದಲ್ಲಿಟ್ಟು ನೋಡುತ್ತಿದ್ದಾರೆ. ನಮ್ಮೆಲ್ಲರಿಗೂ ಅವರು ದೇವರೇ, ಈಗ ನೀವೆಲ್ಲ ಅವರನ್ನು ದೇವರ ಸ್ಥಾನದಲ್ಲಿಟ್ಟು ನೋಡುತ್ತಿದ್ದೀರ. ಈ ದಿನವನ್ನು ಅವರಿಗಾಗಿ ಮೀಸಲಿಡಬೇಕು ಎಂದು ಹಲವು ಜನರು ಬರುತ್ತಿರುವುದಕ್ಕೆ ನನ್ನ ಮನಸ್ಸಿನಲ್ಲಿ ಸಣ್ಣದೊಂದು ಖುಷಿಯಿದೆ. ಇದನ್ನೂ ಓದಿ: ಹೇಗಿದ್ದೀರಾ, ಚೆನ್ನಾಗಿದ್ದೀರಾ? ಎಂದು ಕೇಳುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ : ಧ್ರುವ ಸರ್ಜಾ

meghana raj

ಅಭಿಮಾನಿಗಳಿಗೆ ಕೇಳಿದ್ದೇನು?
ಚಿರು ಬಗ್ಗೆ ನಿಮಗೆ ಇರುವಂತಹ ಪ್ರೀತಿ, ರಾಯನ್‍ಗೆ ನೀವು ಕೊಡುವ ಆರ್ಶೀವಾದವನ್ನು ಇದೇ ರೀತಿ ಮುಂದುವರೆಸಬೇಕು. ನಮ್ಮ ಕುಟುಂಬ ಇನ್ನೂ ಮುಂದೆ ಹೋಗುವುದಕ್ಕೆ ನೀವು ನಮಗೆ ಪ್ರೋತ್ಸಾಹ ಕೊಡಬೇಕು. ನಾನು ನಿಮ್ಮನ್ನು ನೋಡಿ ಸ್ಫೂರ್ತಿ ಪಡೆದುಕೊಳ್ಳುತ್ತೇನೆ. ನಾನು ಮುಂದೆ ನುಗ್ಗುವುದಕ್ಕೆ ಶಕ್ತಿಕೊಡಿ ಎಂದು ಕೇಳಿಕೊಳ್ಳುತ್ತೇನೆ. ಚಿರುಗಾಗಿ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *