– ಹೈಕಮಾಂಡ್, ರಾಹುಲ್ ಗಾಂಧಿ, ಸೋನಿಯಾ, ಸುರ್ಜೇವಾಲಾ ಎಲ್ಲರೂ ಸಿದ್ದರಾಮಯ್ಯ ಪರ ಇದ್ದಾರೆ
ರಾಯಚೂರು: ಮುಂದಿನ ದಿನಗಳಲ್ಲಿ ಕ್ರಾಂತಿ ಆಗಬೇಕು ಎಂದರೆ ಹಿಂದುಳಿದ ವರ್ಗದವರು, ತುಳಿತಕ್ಕೊಳಪಟ್ಟವರು ಸಿಎಂ ಸಿದ್ದರಾಮಯ್ಯರನ್ನ (Siddaramaiah) ಬೆಂಬಲಿಸಿ. ಸಿದ್ದರಾಮಯ್ಯರನ್ನ ಯಾರೂ ಏನೂ ಮಾಡೋಕ್ಕಾಗಲ್ಲ. ನೀವು ತಲೆ ಕೆಡಿಸಿಕೊಳ್ಳಲು ಹೋಗಬೇಡಿ ಎಂದು ಸಚಿವ ಬೈರತಿ ಸುರೇಶ್ (Byrathi Suresh) ಹೇಳಿದ್ದಾರೆ.
Advertisement
ರಾಯಚೂರಿನ (Raichur) ದೇವದುರ್ಗದ ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಹಾಲುಮತ ಸಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನವನ್ನು ಜೀವನ ಧ್ಯೇಯವನ್ನಾಗಿ ಇಟ್ಟುಕೊಂಡು ಸಿದ್ದರಾಮಯ್ಯ ರಾಜ್ಯವನ್ನು ಆಳುತ್ತಿದ್ದಾರೆ. ರಾಜ್ಯದಲ್ಲಿರೋ 60 ಲಕ್ಷದಲ್ಲಿ 90% ನಷ್ಟು ಜನ, ಸಿದ್ದರಾಮಯ್ಯನವರ ಜೊತೆಗಿದ್ದೀರಿ. ಕುರುಬ ಸಮುದಾಯದ ಜೊತೆ ಕೆಳವರ್ಗದವರು, ದಲಿತರು, ಮೇಲ್ವರ್ಗದ ಬಡವರು ಸಿದ್ದರಾಮಯ್ಯರನ್ನ ಎರಡನೇ ಬಾರಿ ಸಿಎಂ ಮಾಡಿದ್ದಾರೆ. ಇದನ್ನೇ ಕನಕದಾಸರು ಹೇಳಿದ್ದು. ಕುಲಕುಲ ಅಂತ ಹೊಡೆದಾಡದಿರಿ ಕುಲದ ಮೂಲವನ್ನೇನಾದರೂ ಬಲ್ಲೀರಾ ಎಂದು ಕನಕದಾಸರ ಮಾತನ್ನು ನೆನಪಿಸಿದರು. ಇದನ್ನೂ ಓದಿ: ಛತ್ತೀಸ್ಗಢದಲ್ಲಿ ಭದ್ರತಾ ಪಡೆಗಳಿಂದ ಎನ್ಕೌಂಟರ್ – ಮೂವರು ನಕ್ಸಲರು ಬಲಿ
Advertisement
Advertisement
ನಮ್ಮ ಹೈಕಮಾಂಡ್, ರಾಹುಲ್ ಗಾಂಧಿ, ಸೋನಿಯಾ ಮೇಡಂ, ಸುರ್ಜೇವಾಲಾ ಎಲ್ಲರೂ ಸಿದ್ದರಾಮಯ್ಯ ಪರ ಇದ್ದಾರೆ. ಯಾರೂ ಅನ್ಯಥಾ ಭಾವಿಸಬೇಡಿ. ರಾಜ್ಯದ ಜನರ ಆಶೀರ್ವಾದ ಇರೋವರೆಗೂ ಯಾರೂ ಅವರನ್ನ ಏನು ಮಾಡಲೂ ಆಗಲ್ಲ. ಬಿಜೆಪಿ ಜೆಡಿಎಸ್ನವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ, ಯಾರೂ ತಲೆಕೆಡೆಸಿಕೊಳ್ಳಬೇಕಿಲ್ಲ ಎಂದರು. ಇದನ್ನೂ ಓದಿ: Kaun Banega Crorepati| 50 ಲಕ್ಷ ಗೆದ್ದ ಬಾಗಲಕೋಟೆಯ ಸಾಮಾನ್ಯ ವೆಲ್ಡರ್ ಮಗ
Advertisement
ಪ್ರಸ್ತುತ ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ, ಮುಂದೆಯೂ ಇರುತ್ತಾರೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈಗಾಗಲೇ ಯಾವುದೇ ಬದಲಾವಣೆ ಅವಕಾಶ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿನ ಸರ್ಕಾರ ಜನಗಳ ಒಳ್ಳೆದಕ್ಕೆ ಉಪಯೋಗಿಸಿಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಸುಗಳ ಕೆಚ್ಚಲು ಕತ್ತರಿಸಿರುವ ಅಮಾನವೀಯ ಕೃತ್ಯ ಖಂಡನೀಯ: ಬೊಮ್ಮಾಯಿ
ಡಿನ್ನರ್ ಪಾರ್ಟಿ ವಿಚಾರವಾಗಿ ಮಾತನಾಡಿ, ಡಿನ್ನರ್ ಪಾರ್ಟಿ ಯಾರೂ ತಡೆ ಹಿಡಿದಿಲ್ಲ, ಮುಂದಕ್ಕೆ ಹಾಕಲಾಗಿದೆ. ಮುಂದೆ ಹಾಕಲಾಗಿದೆ ಎಂದು ಡಿಸಿಎಂ ಮತ್ತು ಗೃಹಸಚಿವರು ಹೇಳಿದ್ದಾರೆ. ಹೈಕಮಾಂಡ್ ಜೊತೆ ಸೇರಿ ಡಿನ್ನರ್ ಪಾರ್ಟಿ ಆಯೋಜನೆ ಮಾಡಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮೆಕ್ಕೆಜೋಳದ ರಾಶಿಗೆ ಬೆಂಕಿ – 10 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳ ಭಸ್ಮ