ಶಿವಮೊಗ್ಗ: 2023ರ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ದೇವರ ಆಶೀರ್ವಾದ ಜೆಡಿಎಸ್ ಪಕ್ಷದ ಮೇಲಿದೆ. ಹೀಗಾಗಿ ಈ ಬಾರಿ ನನ್ನ ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ನಡೆದ ಜೆಡಿಎಸ್ (JDS) ಚುನಾವಣಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮದಲ್ಲಿ ಪ್ರತಿನಿತ್ಯ ಒಂದೊಂದು ಸರ್ವೆ ವರದಿ ಬರುತ್ತಿದೆ. ಈ ಬಾರಿ ಜೆಡಿಎಸ್ 30 ರಿಂದ 35 ಸ್ಥಾನ ಬರದೇ ಇದ್ದರೆ ಆಗ ಪ್ರಶ್ನೆ ಮಾಡಿ ಎಂದು ಹೇಳಿದರು. ಇದನ್ನೂ ಓದಿ: ದೇಶದಲ್ಲೇ ಕರ್ನಾಟಕವನ್ನ ನಂ.1 ರಾಜ್ಯ ಮಾಡ್ತೀವಿ, ನಾನು ನಿಮ್ಮ ಸೇವಕ – ಜನರ ಮುಂದೆ ಮೋದಿ ಭಾವುಕ
ನನ್ನ ಸರ್ಕಾರದ ಅವಧಿಯಲ್ಲಿ ನಾನು ಕ್ಷೇತ್ರಗಳಿಗೆ ಕೊಟ್ಟ ಹಣದಿಂದ ಅಭಿವೃದ್ಧಿ ಆಗಿದೆ. ನಾನು ಅಭಿವೃದ್ಧಿಗೆ ಹಣ ಕೊಡದೇ 40 ಪರ್ಸೆಂಟ್ ಕಮೀಷನ್ ಹೊಡೆದಿದ್ದರೆ, 10 ಸಾವಿರ ಕೋಟಿ ರೂ. ಹೊಡೆಯಬಹುದಿತ್ತು. ಆದ್ರೆ ನಾನು ಲೂಟಿ ಹೊಡೆಯುವ ಕೆಲಸ ಮಾಡಲಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಸಿಎಫ್ ಆಯ್ಕೆ ಮುಸುಕಿನ ಗುದ್ದಾಟ – ಸ್ಪರ್ಧಾಕಾಂಕ್ಷಿಗಳ ಹಿತ ಕಾಯುವಂತೆ KSCEAA ಒತ್ತಾಯ
ಈ ಹಿಂದೆ ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಲಂಚದ ಹಣವನ್ನು ಕೈಯಲ್ಲಿ ಗೋರುತ್ತಿದ್ದರು. ಆದರೆ ಬಿಜೆಪಿಯವರು ಜೆಸಿಬಿ, ಇಟಾಚಿ ಹಾಕಿಕೊಂಡು ಗೋರುತ್ತಿದ್ದಾರೆ. ಸಾಕು ರಾಜ್ಯದ ಜನರು ಅವರಿಗೆ ಇನ್ನೆಷ್ಟು ಗೋರಲು ಬಿಡುತ್ತೀರಾ. ನಮಗೆ 5 ವರ್ಷದ ಸ್ಪಷ್ಟ ಬಹುಮತದ ಸರ್ಕಾರ ನಡೆಸಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.