ನವದೆಹಲಿ: ಭಾರತ ಎಲ್ಲಿಂದ ಬೇಕಾದರೂ ತೈಲವನ್ನು ಖರೀದಿಸುತ್ತದೆ. ಆದರೆ ಈ ರೀತಿಯ ವಿಚಾರಗಳನ್ನು ಭಾರತ ಜನರವರೆಗೂ ಕೊಂಡೊಯ್ಯುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ.
Advertisement
ರಷ್ಯಾ ಮತ್ತು ಉಕ್ರೇನ್ (Russia-Ukraine) ನಡುವಿನ ಸಂಘರ್ಷದಿಂದ ಇಂಧನ ಪೂರೈಕೆಗೆ ಅಡ್ಡಿಯುಂಟಾಗಿ ತೈಲ ಬೆಲೆ ಭಾರೀ ಏರಿಕೆಯಾಯಿತು. ಇದರಿಂದ ಜಾಗತಿಕವಾಗಿ ಇಂಧನ ವ್ಯವಸ್ಥೆ ಮೇಲೆ ಅಡ್ಡಪರಿಣಾಮ ಬೀರಿತು. ಈ ಬಿಕ್ಕಟ್ಟಿನ ಮಧ್ಯೆ ಹರ್ದೀಪ್ ಸಿಂಗ್ ಪುರಿ ಅವರು, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಯಾವುದೇ ದೇಶ ಭಾರತಕ್ಕೆ ಹೇಳಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ
Advertisement
#WATCH | “…India will buy oil from wherever it has to for the simple reason that this kind of discussion can’t be taken to consuming population of India…Have I been told by anyone to stop buying Russian oil?The answer is a categorical ‘no’..,” says Petroleum & Natural Gas Min pic.twitter.com/rgr0Abg9K0
— ANI (@ANI) October 8, 2022
Advertisement
“ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯಿರುವುದರಿಂದ ತೈಲವನ್ನು ಖರೀದಿಸಲಾಗಿದೆ ಎಂಬ ಚರ್ಚೆಗಳು ಬೇಡ. ಭಾರತ ಎಲ್ಲಿಂದ ಬೇಕಾದರೂ ತೈಲವನ್ನು ಖರೀದಿಸುತ್ತದೆ. ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸುವಂತೆ ನಮಗೆ ಯಾರೂ ಹೇಳಿಲ್ಲ. ಭಾರತ ಸರ್ಕಾರವು ತನ್ನ ನಾಗರಿಕರಿಗೆ ಇಂಧನವನ್ನು ಒದಗಿಸುವ ನೈತಿಕ ಜವಾಬ್ದಾರಿ ಹೊಂದಿದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಂದೂಗಳಿಂದ ಅಲ್ಪಸಂಖ್ಯಾತರಿಗೆ ಅಪಾಯವಿಲ್ಲ; ನೀವು ಭಯಪಡಬೇಕಾಗಿಲ್ಲ – ಮೋಹನ್ ಭಾಗವತ್
Advertisement
ಭಾರತವು ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವುದನ್ನು ಯುಕೆ (UK) ಮತ್ತು ಯುಎಸ್ (US) ಟೀಕಿಸಿದೆ. ರಷ್ಯಾ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನ ಮೇಲೆ ಯುರೋಪಿಯನ್ ದೇಶಗಳು ನಿರ್ಬಂಧ ಹೇರಿತ್ತು. ಭಾರತಕ್ಕೂ ರಷ್ಯಾದಿಂದ ಇಂಧನ ಖರೀದಿಸದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (US President Joe Biden) ಮನವಿ ಮಾಡಿದರು. ಹಾಗೆ ಮಾಡುವುದು ಭಾರತದ ಹಿತಾಸಕ್ತಿಗೆ ಒಳಪಡುವುದಿಲ್ಲ ಎಂದು ಮೋದಿ ತಿಳಿಸಿದ್ದರು. ಉಕ್ರೇನ್ ಮೇಲೆ ನಡೆದ ದಾಳಿಯನ್ನು ಅಮೆರಿಕ ಖಂಡಿಸಿದೆ.