ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂ. ನೋಟ್ ಬ್ಯಾನ್ ಮಾಡಿದ ವೇಳೆ ನೋಟು ಬದಲಾವಣೆಗೆ ಕ್ಯೂನಲ್ಲಿ ನಿಂತು ಜನರು ಸಾವನ್ನಪ್ಪಿರುವ ಬಗ್ಗೆ ಯಾವುದೇ ‘ಅಧಿಕೃತ ವರದಿ’ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿ ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಹಣಕಾಸು ಇಲಾಖೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಜನರು ಸಾವನ್ನಪ್ಪಿರುವಂತಹ ಅಧಿಕೃತ ವರದಿ ನಮಗಿನ್ನೂ ಬಂದಿಲ್ಲ ಎಂದು ಹೇಳಿದ್ದಾರೆ.
Advertisement
ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರದಿಂದ ತೊಂದರೆಗೆ ಸಿಲುಕಿ ಎಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿಪಿಎಂ ಸಂಸದ ಜಿತೇಂದ್ರ ಚೌಧರಿ ಹಾಗೂ ಬಿಜೆಪಿ ಸಂಸದ ಮನೋಜ್ ತಿವಾರಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಸಚಿವರು ಇಂದು ಲಿಖಿತ ಉತ್ತರ ನೀಡಿದ್ದಾರೆ.
Advertisement
ನೋಟ್ ಬ್ಯಾನ್ ಮಾಡಿದ್ದಾಗ, ದೇಶದ ಹಲವೆಡೆ ಜನ ಕ್ಯೂನಲ್ಲಿ ನಿಂತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದರು ಎಂಬ ವರದಿಗಳೂ ಬಂದಿದ್ದವು. ಕಳೆದ ನವೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1 ಸಾವಿರ ರೂ.ಗಳ ನೋಟನ್ನು ಬ್ಯಾನ್ ಮಾಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ನೋಟುಗಳನ್ನು ಜಮೆ ಮಾಡಲು ಜನರು ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.
Advertisement
ಇದನ್ನೂ ಓದಿ:ಮತ್ತೆ 2,000 ನೋಟು ನಿಷೇಧವಾಗುತ್ತಾ: ಜನ್ರಲ್ಲಿ ಮೂಡಿದ್ದ ಪ್ರಶ್ನೆಗೆ ಜೇಟ್ಲಿ ಉತ್ತರಿಸಿದ್ರು