ಬೆಂಗಳೂರು: ದರ್ಶನ್ (Darshan) ನಂಬರ್ ಇಲ್ಲ, ಸಂಪರ್ಕದಲ್ಲೂ ನಾನು ಇಲ್ಲ. ಯಾವುದೋ ಮದುವೆಯಲ್ಲಿ ಸಿಕ್ಕಿದಾಗ ಮಾತನಾಡಿದ್ದೇನೆ ಎಂದು ರಮ್ಯಾ (Ramya) ಹೇಳಿದ್ದಾರೆ.
ದರ್ಶನ್ ಅಭಿಮಾನಿಗಳ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದರ್ಶನ್‌ಗೆ 100% ಜವಾಬ್ದಾರಿಯಿದೆ. ಈ ರೀತಿಯ ಮಸೇಜ್‌ಗಳ ವಿರುದ್ಧ ವಿಡಿಯೋ ಮಾಡುತ್ತಿದ್ದರೆ ರೇಣುಕಾಸ್ವಾಮಿ ಮೆಸೇಜ್ ಮಾಡುತ್ತಿರಲಿಲ್ವೋ ಏನು?. ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಅಲ್ವಾ? ಮೊದಲೇ ದರ್ಶನ್ ಎಚ್ಚರಿಕೆ ನೀಡುತ್ತಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟರು.
ನನಗೆ ಬಹಳಷ್ಟು ಕೆಟ್ಟ ಕಮೆಂಟ್ ಬಂದಿದೆ. ಕೆಟ್ಟ ಕಮೆಂಟ್ ಬಂದ ಪೈಕಿ ಹೆಚ್ಚು ಕೆಟ್ಟ ಕಮೆಂಟ್ ಬಂದ 43 ಖಾತೆಗಳ ವಿರುದ್ಧ ದೂರು ನೀಡಿದ್ದೇನೆ. ನನ್ನನ್ನು ರೇಪ್ ಮಾಡಬೇಕಿತ್ತು. ರೇಣುಕಾಸ್ವಾಮಿ ಬದಲು ನಿಮ್ಮನ್ನು ಹತ್ಯೆ ಮಾಡಬೇಕಿತ್ತು ಎಂದು ಡಿ ಬಾಸ್ ಫ್ಯಾನ್ಸ್ ಕಮೆಂಟ್ ಮಾಡಿದ್ದರು ಎಂದು ತಿಳಿಸಿದರು.
ದೂರು ನೀಡಿದ ಖಾತೆಗಳಲ್ಲಿ ಹುಡುಗಿಯರ ಹೆಸರಿನಲ್ಲಿರುವ ಖಾತೆಗಳ ವಿರುದ್ಧವೂ ದೂರು ನೀಡಿದ್ದೇನೆ. ಹುಡುಗಿಯರು ಈ ರೀತಿ ಕೆಟ್ಟ ಕಮೆಂಟ್ ಮಾಡಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಹೆಣ್ಮಕ್ಕಳ ಫೋಟೋವನ್ನು ಹುಡುಗರು ದುರ್ಬಳಕೆ ಮಾಡಿರುವ ಸಾಧ್ಯತೆಯಿದೆ. ಒಬ್ಬಳು ಹುಡುಗಿ ಮೆಸೇಜ್ ಮಾಡಿ, ಮೇಡಂ ಕ್ಷಮಿಸಿ ಅಣ್ಣ ಹೀಗೆ ಮಾಡಿದ್ದಾರೆ ಎಂದು ಮೆಸೇಜ್ ಕಳುಹಿಸಿದ್ದರು. ಅದನ್ನು ನಾನು ದೂರಿನಲ್ಲಿ ಉಲ್ಲೇಖಿಸಿದ್ದೇನೆ ಎಂದರು.