– ಅಪಘಾತ ತಡೆಯಲು ಸಂಚಾರಿ ಪೊಲೀಸರಿಂದ ಮಾರ್ಗಸೂಚಿ
ಬೆಂಗಳೂರು: ಅಪಘಾತ ತಡೆಯಲು ಸಂಚಾರಿ ಪೊಲೀಸರು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ನೈಸ್ ರಸ್ತೆಯಲ್ಲಿ ವಾಹನಗಳಿಗೆ ವೇಗದ ಮಿತಿ ನಿಗದಿಪಡಿಸಲಾಗಿದೆ. ಅಲ್ಲದೇ, ರಾತ್ರಿ ಹೊತ್ತಿನಲ್ಲಿ ಬೈಕ್‌ಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.
Advertisement
ಯಾವ ವಾಹನಕ್ಕೆ ಎಷ್ಟು ವೇಗದ ಮಿತಿ?
ಎಂಟಕ್ಕಿಂತ ಹೆಚ್ಚು ಪ್ರಯಾಣಿಕರು ಇರುವ ವಾಹನಗಳಿಗೆ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ. 9 ಕ್ಕಿಂತ ಹೆಚ್ಚು ಪ್ರಯಾಣಿಕರು ಇರುವ ವಾಹನಗಳ ವೇಗದಿ ಮಿತಿ 100 ಕಿಮೀ ಇದೆ. ಗೂಡ್ಸ್ ವಾಹನಗಳು 80 ಕಿಮೀ ಹಾಗೂ ದ್ವಿಚಕ್ರ ವಾಹನಗಳಿಗೆ 80 ಕಿಮೀ ವೇಗದ ಮಿತಿ ನಿಗದಿ ಮಾಡಲಾಗಿದೆ.
Advertisement
ನೈಸ್ ರಸ್ತೆಯಲ್ಲಿ ಬೈಕ್ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯ ತನಕ ಬೈಕ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
Advertisement
ನೈಸ್ ರಸ್ತೆಯಲ್ಲಿ ಅಪಘಾತಕ್ಕೆ ನೈಸ್ ರಸ್ತೆ ಸುತ್ತಮುತ್ತ ಇರುವ ಸಂಚಾರಿ ಪೊಲೀಸರು ಕಾರಣ ಹುಡುಕಿದ್ದಾರೆ. ಎಂಟು ಸಂಚಾರಿ ಪೊಲೀಸರ ವರದಿಯನ್ನ ಆಧರಿಸಿ ಆದೇಶ ಹೊರಡಿಸಲಾಗಿದೆ. ನಿಯಮ ಉಲ್ಲಂಘನೆ ಹಾಗೂ ಅತಿ ವೇಗ, ಅಜಾಗರೂಕತೆ ಅಪಘಾತಗಳಿಗೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಕಾಮಾಕ್ಷಿಪಾಳ್ಯ, ಕೆಂಗೇರಿ, ಜ್ಞಾನಭಾರತಿ, ಹುಳಿಮಾವು, ಬ್ಯಾಟರಾಯನಪುರ, ತಲಘಟ್ಟಪುರ, ಕೆ.ಎಸ್ ಲೇಔಟ್, ಎಲೆಕ್ಟ್ರಾನ್ ಸಿಟಿ ಸಂಚಾರಿ ಪೊಲೀಸರು ಅಪಘಾತಕ್ಕೆ ಕಾರಣ ಪತ್ತೆ ಮಾಡಿ ಕಮಿಷನರ್‌ಗೆ ವರದಿ ಕೊಟ್ಟಿದ್ದರು. ಕಳೆದ ಮೂರು ವರ್ಷದಲ್ಲಿ ನೈಸ್ ರಸ್ತೆಯಲ್ಲಿ ಸಂಭವಿಸಿರುವ ಅಪಘಾತಗಳ ಸಂಖ್ಯೆ ಆಧರಿಸಿ ವರದಿ ಸಿದ್ಧಪಡಿಸಲಾಗಿದೆ.
ಯಾವ ವರ್ಷ ಎಷ್ಟು ಅಪಘಾತ?
2022:
ಮಾರಣಾಂತಿಕ ಅಪಘಾತಗಳ ಸಂಖ್ಯೆ: 42
ಮಾರಣಾಂತಿಕವಲ್ಲದ ಅಪಘಾತಗಳು: 69
2023:
ಮಾರಣಾಂತಿಕ ಅಪಘಾತಗಳ ಸಂಖ್ಯೆ: 37
ಮಾರಣಾಂತಿಕವಲ್ಲದ ಅಪಘಾತಗಳು: 83
2024 ಜೂನ್ ವರೆಗೆ
ಮಾರಣಾಂತಿಕ ಅಪಘಾತಗಳ ಸಂಖ್ಯೆ: 13
ಮಾರಣಾಂತಿಕವಲ್ಲದ ಅಪಘಾತಗಳು: 52