ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದ್ದು, ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ 2019ರ ಹೊಸ ವರ್ಷದ ಜನವರಿ 1ರ ಬೆಳಗ್ಗೆ 8 ಗಂಟೆಯವರೆಗೂ ನಂದಿಗಿರಿಧಾಮ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಪ್ರವಾಸಿಗರ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ. 2019ರ ಜನವರಿ 1ರ ಬೆಳಗ್ಗೆ 8 ಗಂಟೆ ತರುವಾಯ ಪ್ರವಾಸಿಗರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಮುಕ್ತ ಅವಕಾಶವಿದೆ. ನಂದಿಗಿರಿಧಾಮದ ಜೊತೆ ಜೊತೆಗೆ ಪ್ರಮುಖ ಪ್ರವಾಸಿ ತಾಣಗಳಾದ ಸ್ಕಂದಗಿರಿ ಬೆಟ್ಟ ಹಾಗೂ ಆವಲಬೆಟ್ಟದಲ್ಲೂ ಸಹ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ತೋಟದ ಮನೆಯಲ್ಲಿ ಗಾಂಜಾ ಗಮ್ಮತ್ತು? ನಶೆಯಲ್ಲಿ ಯುವಕ-ಯುವತಿಯರ ತೇಲಾಟ!
Advertisement
Advertisement
ಅಂಕು-ಡೊಂಕಿನ ನಂದಿಗಿರಿಧಾಮದ ರಸ್ತೆಯಲ್ಲಿ ಅಪಘಾತಗಳಾಗುವ ಸಂಭವ, ಮದ್ಯ ಸೇವಿಸಿದ ಅಮಲಲ್ಲಿ ಅನಾಹುತಗಳ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಂದಿಗಿರಿಧಾಮದ ಪ್ರವೇಶವನ್ನು ನಿಷೇಧಿಸಲಾಗಿದೆ. ಇದಲ್ಲದೆ ನಂದಿಗಿರಿಧಾಮದಲ್ಲಿನ ವಸತಿ ಗೃಹಗಳ ಬುಕ್ಕಿಂಗ್‍ಗೆ ಸಹ ಅವಕಾಶವಿಲ್ಲವಾಗಿದ್ದು, ಡಿಸೆಂಬರ್ 31ರಂದು ನಂದಿಗಿರಿಧಾಮದ ವಸತಿ ಗೃಹಗಳಲ್ಲೂ ಸಹ ಯಾರೂ ತಂಗುವಂತಿಲ್ಲ. ಇದನ್ನೂ ಓದಿ: ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್
Advertisement
Advertisement
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಎಸ್‍ಪಿ ಕಾರ್ತಿಕ್ ರೆಡ್ಡಿ, “ಜಿಲ್ಲೆಯಾದ್ಯಾಂತ ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರೆಗೂ ಕಡಿವಾಣ ಹಾಕಿ ದಂಡ ವಿಧಿಸೋಕೆ ಜಿಲ್ಲೆಯ ಪೊಲೀಸರು ಸಜ್ಜಾಗಿರುತ್ತಾರೆ. ನಿಗದಿಪಡಿಸಿದ ಸಮಯದ ನಂತರವೂ ಮದ್ಯ ಮಾರಾಟ ಮಾಡಿದರೆ ಬಾರ್‍ಗಳ ವಿರುದ್ಧವೂ ಕ್ರಮ ಕೈಗೊಳ್ಳುಲಾಗುವುದು” ಎಂದು ಹೇಳಿದರು. ಇದನ್ನೂ ಓದಿ: ಹೊಸ ವರ್ಷದಂದು ಪ್ರವಾಸಿ ತಾಣ ಮುತ್ತತ್ತಿಗೆ ನೋ ಎಂಟ್ರಿ
ಇದಲ್ಲದೆ ಹೊಸ ವರ್ಷಾಚರಣೆಗೆ ಪಾರ್ಟಿ ಆಯೋಜನೆ ಮಾಡುವಂತವರು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರಿಂದ ಅನುಮತಿ ಪತ್ರ ಪಡೆದು ಪಾರ್ಟಿ ಆಯೋಜನೆ ಮಾಡಬೇಕಿದ್ದು, ಮದ್ಯ ಸರಬರಾಜು ಸಹ ಮಾಡುತ್ತಿದ್ರೆ ಅದಕ್ಕೂ ಸಂಬಂಧಪಟ್ಟ ಅಬಕಾರಿ ಇಲಾಖೆಯಿಂದ ಅನುಮತಿ ಕಡ್ಡಾಯ ಅಂತ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv