ಬೆಂಗಳೂರು: ಇಡೀ ವಿಶ್ವಕ್ಕೆ ಕೊರೊನಾ ವೈರಸ್ ತನ್ನ ಆರ್ಭಟ ಹೇಗಿದೆ ಎಂದು ತೋರಿಸಿ ಕೆಲ ದಿನಗಳ ಕಾಲ ಸುಮ್ಮನೆ ಆಗಿತ್ತು. ವ್ಯಾಕ್ಸಿನ್ ರಾಮಬಾಣದಂತೆ ಕೊರೊನಾದ ವಿರುದ್ಧ ಕೆಲಸ ಮಾಡಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಮಾಡಿತ್ತು. ಇದೀಗ ಮತ್ತೆ ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ವೈರಸ್‍ಗೆ ಆತಂಕ ಬೇಡ ಮುಂಜಾಗ್ರತಾ ಕ್ರಮ ಅಗತ್ಯ ಎಂದು ಖ್ಯಾತ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈಗ ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರಿ ವೈರಸ್ ಕಾಣಿಸಿಕೊಂಡು ಇಡೀ ವಿಶ್ವ ಮತ್ತೆ ಕೊರೊನಾದ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಈಗಾಗಲೇ 13 ಕ್ಕೂ ಹೆಚ್ಚು ರಾಷ್ಟ್ರದಲ್ಲಿ ರೂಪಾಂತರಿ ವೈರಸ್ ತನ್ನ ಇರುವಿಕೆಯನ್ನು ತೋರಿಸಿದೆ. ಹಾಗಾಗಿ ಭಾರತವೂ ಈ ರೂಪಾಂತರಿ ವೈರಸ್ ಕಾಟಕ್ಕೆ ಒಳಗಾಗುವ ಸಾದ್ಯತೆ ಇದೆ. ವಿದೇಶಗಳಲ್ಲಿ ಅಬ್ಬರ ಶುರು ಮಾಡಿರುವ ಹೊಸ ರೂಪಾಂತರಿ ವೈರಸ್ ನಮ್ಮ ದೇಶಕ್ಕೂ ಬರುತ್ತೆ, ಇಡೀ ವಿಶ್ವವೇ ಗ್ಲೋಬಲ್ ವಿಲೇಜ್ ಆಗಿರುವುದರಿಂದ ಮ್ಯೂಟೆಂಟ್ ಇರೋ ದೇಶದಿಂದ ಬರುವ ಪ್ರಯಾಣಿಕರು ಸೋಂಕು ತರುವ ಸಾಧ್ಯತೆ ಇದೆ. ಅತಂಕಗೊಳ್ಳುವ ಆಗತ್ಯವಿಲ್ಲ ಈ ಹೊಸ ರೂಪಾಂತರಿ ವೈರಸ್ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂದರು. ಇದನ್ನೂ ಓದಿ: ವಸತಿ ಶಾಲೆಯ 13 ಮಕ್ಕಳಲ್ಲಿ ಕೊರೊನಾ ದೃಢ – ಪೋಷಕರಲ್ಲಿ ಆತಂಕ
Advertisement
Advertisement
ಅದರೆ ಈ ವೈರಸ್ ಇದು ಬೇಗ ಸೋಂಕು ಹರಡುವ ಶಕ್ತಿ ಹೊಂದಿದೆ. ಹೆಚ್ಚು ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಳ್ಳುವ ಶಕ್ತಿ ಹೊಂದಿದೆ ಜೊತೆಗೆ ಈ ವೈರಸ್ ವ್ಯಾಕ್ಸಿನ್ ಪಡೆದವರಿಗೂ ಬಂದಿದೆ ಹಾಗಾಗಿ ವ್ಯಾಕ್ಸಿನ್ ಪಡೆದರೂ ಈ ರೂಪಾಂತರಿ ವೈರಸ್ ಬರುವ ಸಾಧ್ಯತೆ ಇದೆ ಸರ್ಕಾರ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಈ ಸೋಂಕು ಹರಡದಂತೆ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು, ಜೊತೆಗೆ ವ್ಯಾಕ್ಸಿನ್ ಪಡೆಯುವುದು ಬಹಳ ಮುಖ್ಯವಾಗಿದೆ ಎಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಬೇಕು. ಜೊತೆಗೆ ಫ್ರೆಂಟ್ ಲೈನ್ ವಾರಿಯರ್ಸ್‍ಗೆ ಮೂರನೇ ಡೋಸ್ ಕೊಡುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಜನ ಕೊರೊನಾ ನಿಯಮಗಳನ್ನು ಪಾಲಿಸಬೇಕು, ಮಕ್ಕಳು ವಿದ್ಯಾರ್ಥಿಗಳು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿಬೇಕು. ಶಾಲಾ ಕಾಲೇಜುಗಳಲ್ಲಿ ಕೊರೊನಾ ರೂಲ್ಸ್ ಫಾಲೋ ಆಗಬೇಕು, ಲಾಕ್‍ಡೌನ್ ಮಾಡುವ ಅಗತ್ಯವಿಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಿದರೆ ಈ ಸೋಂಕಿನಿಂದ ದೂರ ಉಳಿಯಬಹುದು ಎಂದು ಧೈರ್ಯ ತುಂಬಿದರು. ಇದನ್ನೂ ಓದಿ: ವಿದೇಶಗಳಲ್ಲಿ ಓಮಿಕ್ರಾನ್ ಅಬ್ಬರ – ರಾಜ್ಯದಲ್ಲಿ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತ ಜನ
Advertisement
ಕೊರೊನಾ ವೈರಸ್ ಹರಡುವ ಗುಣ ಹೊಂದಿದೆ. ಹಾಗಾಗಿ ಜನ ಎಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು, ಸಾಮಾಜಿಕ ಅಂತರ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಮಾಡಬೇಕು ಜೊತೆಗೆ ವ್ಯಾಕ್ಸಿನ್ ಪಡೆದುಕೊಳ್ಳಬೇಕು. ಮಕ್ಕಳಿಗೂ ಸಹ ವ್ಯಾಕ್ಸಿನ್ ಲಭ್ಯವಾಗಲಿದೆ ಆಗ ಮಕ್ಕಳಿಗೂ ವ್ಯಾಕ್ಸಿನ್ ಹಾಕಿಸಬೇಕು ಎಂದು ಸಲಹೆ ನೀಡಿದರು.