ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್ ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿ ಜೇಮ್ಸ್ ಎತ್ತಂಗಡಿಗೆ ಕುತಂತ್ರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಅನಾವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಥಿಯೇಟರ್ ನಿಂದ ತೆಗೆಯುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
Advertisement
ನಗರದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತಾಡಿದ್ದೀನಿ. ಶಿವರಾಜ್ ಕುಮಾರ್ ಜೊತೆಯೂ ಮಾತಾಡಿದ್ದೀನಿ, ನನ್ನ ಗಮನಕ್ಕೆ ತನ್ನಿ ಎಂದಿದ್ದೇನೆ. ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತಂದು ಕೂಡಲೇ ಸರಿಪಡಿಸಿ ಅಂತಾ ಸೂಚಿಸಿರುವುದಾಗಿ ತಿಳಿಸಿದರು. ಇದನ್ನೂ ಓದಿ: Exclusive Details- ಕೆಜಿಎಫ್ 2 ರಿಲೀಸ್: ಮಾ.27ಕ್ಕೆ ಟ್ರೇಲರ್ ಲಾಂಚ್, 7 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್, ಯಾರೆಲ್ಲ ಗೆಸ್ಟ್?
Advertisement
Advertisement
ಅನಾವಶ್ಯಕವಾಗಿ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ. ಸಂಬಂಧಪಟ್ಟ ವಿತರಕರು, ನಿರ್ಮಾಪಕರಿಗೆ ಅಧಿಕಾರ ಇದೆ, ನೀವೇ ಇದನ್ನ ಸರಿಪಡಿಸಬೇಕು ಅಂತಾ ಹೇಳಿದ್ದೇನೆ. ಬಿಜೆಪಿ ಶಾಸಕರು ಎತ್ತಂಗಡಿ ಮಾಡಿಸ್ತಿದ್ದಾರೆ ಅನ್ನೋದೆಲ್ಲ ಸುಳ್ಳು. ಕಾಂಗ್ರೆಸ್ ಅವರು ಸಿನಿಮಾದಲ್ಲೂ ರಾಜಕೀಯ ಮಾಡ್ತಿದ್ದಾರೆ. ಈ ಮೂಲಕ ಎಷ್ಟು ಕೆಳಮಟ್ಟದಲ್ಲಿ ಹೋಗ್ತಿದೆ ನೋಡಿ, ಬೇರೆ ಏನೂ ಇಲ್ಲವಲ್ಲ ಅವರಿಗೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಆರ್.ಆರ್.ಆರ್ ಬೈಕಾಟ್ : ಕನ್ನಡ ಪರ ಹೋರಾಟಗಾರರಿಗೇ ಜವಾಬ್ದಾರಿ ಕೊಟ್ಟ ರಾಜಮೌಳಿ ಟೀಮ್
Advertisement
ದಿ ಕಾಶ್ಮೀರ್ ಫೈಲ್ಸ್, ಜೇಮ್ಸ್ ಸಿನಿಮಾ ನಡುವಿನ ಕದನ ಇದು ಎಂದು ಅಪ್ಪು ಫ್ಯಾನ್ಸ್ ನಂಬಿದ್ದಾರೆ. ಅದಕ್ಕಾಗಿಯೇ ಅವರು ಜೇಮ್ಸ್ ಚಿತ್ರದ ಬೆನ್ನಿಗೆ ನಿಂತಿದ್ದಾರೆ. ಈಗಾಗಲೇ ಜೇಮ್ಸ್ ಚಿತ್ರವನ್ನು ಎತ್ತಂಗಡಿ ಮಾಡಬೇಡಿ ಎಂದು ಅಭಿಮಾನಿಗಳು ಧರಣಿ ಮಾಡುತ್ತಿದ್ದಾರೆ. ಅಲ್ಲದೆ ಥಿಯೇಟರ್ ಗೆ ಮುತ್ತಿಗೆ ಹಾಕಲು ಸಜ್ಜಾಗುತ್ತಿದ್ದಾರೆ. ಮಲ್ಟಿಫ್ಸೆಕ್ಸ್ ಗಳಲ್ಲಿ ಜೇಮ್ಸ್ ಚಿತ್ರವನ್ನು ತೆಗೆದರೆ ನಾವು ಥಿಯೇಟರ್ ಒಳಗೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕೆಲವು ಕನ್ನಡ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.