ಬೆಂಗಳೂರು: ಕೆರೆ, ರಾಜಾಕಾಲುವೆ (Rajkaluve) ಒತ್ತುವರಿ ತೆರವಿಗೆ ನೋಟಿಸ್ (Notice) ಕೊಡುವ ಅಗತ್ಯ ಇಲ್ಲ, ನೋಟಿಸ್ ಕೊಡದೆಯೇ ತೆರವು ಮಾಡಬಹುದು ಎಂದು ಸಚಿವ ಆರ್. ಅಶೋಕ್ (R Ashok) ಹೇಳಿದ್ದಾರೆ.
ಮಹಾದೇವಪುರ, ಬೊಮ್ಮನಹಳ್ಳಿ ವಲಯದಲ್ಲಿ ರಾಜಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ, ರಾಜಾಕಾಲುವೆ (Rajkaluve) ಒತ್ತುವರಿ ತೆರವಿಗೆ ನೋಟಿಸ್ ಕೊಡುವ ಅಗತ್ಯವಿಲ್ಲ, ಕೊಡದೇ ತೆರವು ಮಾಡಬಹುದು ಎಂದಿದ್ದಾರೆ. ಇದನ್ನೂ ಓದಿ: ಮಹಾದೇವಪುರದಲ್ಲಿ ರಾಜಕಾಲುವೆ ಒತ್ತುವರಿ – 8 ಕಡೆ ಜೆಸಿಬಿ ಆಪರೇಷನ್ ಆರಂಭ
Advertisement
Advertisement
ಯಾರೇ ಒತ್ತುವರಿ ಮಾಡಿದ್ರೂ ಕಾನೂನು ಪ್ರಕಾರ ಕ್ರಮ ಆಗುತ್ತೆ. ಬಡವರು, ಸಾಹುಕಾರರು ಅಂತ ನೋಡದೇ ಒತ್ತುವರಿ ತೆರವು ನಿರಂತರವಾಗಿ ಮಾಡ್ತೇವೆ. ಅಧಿಕಾರಿಗಳು ತಾರತಮ್ಯ ಮಾಡದೇ ಕ್ರಮ ಕೈಗೊಳ್ಳಬೇಕು. ಒಂದು ವಾರ ತೆರವು ಮಾಡಿ ನಂತರ ಸುಮ್ಮನಾಗಬಾರದು, ತೆರವು ಕಾರ್ಯ ನಿರಂತರ ಮಾಡಿ ಅಂತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ಯಾನರ್‌ನಲ್ಲಿ ಸಿದ್ದು ಫೋಟೋ ಮಾಯ- ಸಿದ್ದರಾಮಯ್ಯ ಇಲ್ಲಿಗೆ ಬಂದಾಗ ಫೋಟೋ ಹಾಕ್ತಾರೆ: ಡಿಕೆಶಿ
Advertisement
Advertisement
ನಿನ್ನೆ 13 ವಿಲ್ಲಾಗಳಿಗೆ ನೋಟಿಸ್:
ಬೆಂಗಳೂರು ಮಳೆಯಿಂದಾಗಿ ರೈನ್ ಬೋ ಡ್ರೈವ್ (Rainbow Drive) ಬಡಾವಣೆಯಲ್ಲಿ ನೀರು ತುಂಬಿ ಅವಾಂತರ ಸೃಷ್ಟಿಯಾದ ಬೆನ್ನಲ್ಲೇ ಎಚ್ಚೆತ್ತ ಕಂದಾಯ ಇಲಾಖೆ (Revenue Department) ಜಲಾವೃತ ಮೂಲವನ್ನು ಕಂಡುಹಿಡಿದು, ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದ 13 ವಿಲ್ಲಾಗಳಿಗೆ ನಿನ್ನೆಯಷ್ಟೇ ನೋಟಿಸ್ ನೀಡಿದೆ.
ರೈನ್ ಬೋ ಬಡಾವಣೆ ಜುನ್ನಸಂದ್ರ ಹಾಗೂ ಹಾಲನಾಯಕನಹಳ್ಳಿ ಸರ್ವೆ ನಂಬರ್ ನಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆ 13 ವಿಲ್ಲಾಗಳಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆಯೇ ವಿಲ್ಲಾ ತೆರವು ಮಾಡಲು ಹೊರಟಾಗ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮತ್ತೊಮ್ಮೆ ತೆರವಿಗೆ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ರೈ ನೋಟಿಸ್ ನೀಡಿದ್ದಾರೆ.