ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ (Maharashtra Assembly Election) ಮುನ್ನ ಮಹಾ ವಿಕಾಸ್ ಅಘಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವಿಲ್ಲ ಮತ್ತು ಒಕ್ಕೂಟವು ಸಾಮೂಹಿಕ ನಾಯಕತ್ವದಲ್ಲಿ ಸ್ಪರ್ಧಿಸಲಿದೆ ಎಂದು ಶರದ್ ಪವಾರ್ (Sharad Pawar) ಹೇಳಿದ್ದಾರೆ. ಸಿಎಂ ಮುಖ ಘೋಷಿಸುವಂತೆ ಉದ್ಧವ್ ಠಾಕ್ರೆ (Uddhav Thackeray) ಒತ್ತಾಯಿಸಿರುವ ನಡುವೆ ಈ ಮಹತ್ವದ ಹೇಳಿಕೆ ಹೊರಬಂದಿದೆ.
ಈ ಬಗ್ಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಯಾವ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದರ ಆಧಾರದ ಮೇಲೆ ಮುಖ್ಯಮಂತ್ರಿಯಾಗುತ್ತಾರೆ. ಸಿಎಂ ಮುಖವನ್ನು ಪ್ರಕಟಿಸದೇ ಚುನಾವಣೆ ಹೋಗುವುದು ಯಾವುದಕ್ಕೂ ಅಡ್ಡಿಯಾಗುವುದಿಲ್ಲ. ಒಕ್ಕೂಟ ಗೆಲುವು ಸಾಧಿಸಿದ ಬಳಿಕ ಯಾರು ನೇತೃತ್ವ ವಹಿಸಬೇಕು ಎಂಬುದು ಸಂಖ್ಯಾಬಲದ ಮೇಲೆ ನಿರ್ಧಾರವಾಗಬೇಕು ಎಂದರು. ಇದನ್ನೂ ಓದಿ: ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಬೇಡಿಕೆ ಪರಿಶೀಲಿಸಿ ಸೂಕ್ತ ಕ್ರಮ: ಸಿದ್ದರಾಮಯ್ಯ
Advertisement
Advertisement
ಇದಕ್ಕೆ ಪೂರಕವಾಗಿ ಉದಾಹರಣೆ ನೀಡಿದ ಅವರು, ತುರ್ತು ಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಅವರ ಹೆಸರು ಘೋಷಣೆಯಾಯಿತು. ಚುನಾವಣೆಯಲ್ಲಿ ಮತ ಕೇಳುವಾಗ ಅವರ ಹೆಸರನ್ನು ಎಲ್ಲೂ ಘೋಷಿಸಿರಲಿಲ್ಲ. ಹೀಗಾಗಿ ಈಗ ಸಿಎಂ ಮುಖಕ್ಕೆ ಬೇಡಿಕೆ ಇಡುವ ಅಗತ್ಯವಿಲ್ಲ. ಜನರ ಬೆಂಬಲ ಪಡೆದ ನಂತರ ನಾವು ಒಟ್ಟಾಗಿ ಕೂತು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಳಸಾ-ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆ ಕರೆಯಿರಿ- ಸಿಎಂಗೆ ಕೋನರೆಡ್ಡಿ ಒತ್ತಾಯ
Advertisement
Advertisement
ಕಳೆದ ತಿಂಗಳು ನಡೆದ ಎಂವಿಎ ಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಅನುಮೋದಿಸಿದ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿದರು. ಮುಖ್ಯಮಂತ್ರಿ ಹುದ್ದೆಗೆ ತಮ್ಮ ಆಯ್ಕೆಯನ್ನು ಘೋಷಿಸುವಂತೆ ನಾನು ಮೈತ್ರಿಕೂಟದ ಎಲ್ಲಾ ನಾಯಕರಿಗೆ ಮನವಿ ಮಾಡುತ್ತೇನೆ ಮತ್ತು ನಾನು ಅವರನ್ನು ಬೇಷರತ್ತಾಗಿ ಬೆಂಬಲಿಸುತ್ತೇನೆ ಎಂದು ಠಾಕ್ರೆ ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ವಿಜಯೇಂದ್ರ ಚಾಲನೆ: ರಾಜ್ಯದಲ್ಲಿ 1 ಕೋಟಿ ನೋಂದಣಿ ಗುರಿ