ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಏನ್ ಮಾತನಾಡುತ್ತಾರೆ ಅನ್ನೊದು ಗೊತ್ತಾಗಲ್ಲ. ಆರ್ ಎಸ್‍ಎಸ್ (RSS) ಬ್ಯಾನ್ ಮಾಡೋ ನೆಸೆಸಿಟಿ ಇಲ್ಲ. ಅವರೇನು ದೇಶದ್ರೋಹಿ ಕೆಲಸ ಮಾಡ್ತಾರಾ ಎಂದು ಸಚಿವ ಎಸ್.ಟಿ ಸೋಮಶೇಖರ್ (S.T Somashekhar) ಪ್ರಶ್ನಿಸಿದ್ದಾರೆ.
Advertisement
ಆರ್ ಎಸ್‍ಎಸ್ ಬ್ಯಾನ್ ಮಾಡಿ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆರ್ ಎಸ್‍ಎಸ್ ಏನ್ ಕೆಲಸ ಮಾಡುತ್ತೆ, ಪಿಎಫ್‍ಐ ಏನ್ ಕೆಲಸ ಮಾಡುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆರ್ ಎಸ್‍ಎಸ್ ದೇಶಭಕ್ತಿ ಕೆಲಸ ಮಾಡುತ್ತೆ. ಪಿಎಫ್‍ಐ (PFI) ದೇಶದ್ರೋಹಿ ಕೆಲಸ ಮಾಡುತ್ತೆ. ಆರ್ ಎಸ್‍ಎಸ್ ಬ್ಯಾನ್ ಮಾಡುವ ಪ್ರಮೇಯವೇ ಇಲ್ಲ. ಪಿಎಫ್‍ಐ ಬ್ಯಾನ್ ಗೆ ಎಲ್ಲಾ ಕಡೆಯಿಂದ ಒತ್ತಡ ಇತ್ತು. ಹಾಗಾಗಿ ಎಲ್ಲಾ ಮಾಹಿತಿ ಕಲೆ ಹಾಕಿ ಕೇಂದ್ರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ ಎಂದರು.
Advertisement
Advertisement
ಭಾರತ್ ಜೋಡೋ ಯಾತ್ರೆ (Bharat Jodo Yatre) ಯಿಂದ ದಸರಾ ಕಾರ್ಯಕ್ರಮಕ್ಕೆ ತೊಂದರೆ ಯಾಗುತ್ತೆ ಅನ್ನೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ. ಭಾರತ್ ಜೋಡೋ ಯಾತ್ರೆಯಿಂದ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸರು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಟ್ರಾಫಿಕ್ (Traffic) ಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ ಎಂದು ವಿವರಿಸಿದರು. ಇದನ್ನೂ ಓದಿ: PFI ಸಂಘಟನೆಗಳ ಆಸ್ತಿ ಬಗ್ಗೆ ಸರ್ವೆ ಕಾರ್ಯ ಆಗ್ತಿದೆ: ಆರಗ ಜ್ಞಾನೇಂದ್ರ
Advertisement
ಡಿ.ಕೆ.ಶಿವಕುಮಾರ್ (D.K Shivakumar) ಮೇಲೆ ಸಿಬಿಐ (CBI) ದಾಳಿ ಸಂಬಂಧ ಮಾತನಾಡಿ, ಕಾನೂನು ಬಾಹಿರ ಚಟುವಟಿಕೆಗಳ ಆರೋಪದ ಮೇಲೆ ದಾಳಿ ಮಾಡಿದ್ದಾರೆ. ಇದು ರೊಟಿನ್ ಪ್ರೋಸಸ್. ಡಿಕೆಶಿ ಅವರನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡ್ತಿಲ್ಲ. ಎಲ್ಲಾ ಕಡೆಯೂ ದಾಳಿ ಆಗ್ತಿದೆ. ಅವರು ಪರಿಶುದ್ಧ ಆದ್ರೆ ಯಾಕೆ ಹೆದರಬೇಕು ಎಂದರು.