ಕಲಬುರಗಿ: ಮುಸ್ಲಿಂ ವಿದ್ಯಾರ್ಥಿಗಳಿಗೆ ವಕ್ಫ್ ಬೋರ್ಡ್‌ನಿಂದ ಪ್ರತ್ಯೇಕ ಕಾಲೇಜು ಸ್ಥಾಪನೆ ಮಾಡುವುದು ತಪ್ಪು. ಪ್ರತ್ಯೇಕ ಮುಸ್ಲಿಂ ಕಾಲೇಜಿನ(Muslim College) ಅವಶ್ಯಕತೆ ಇಲ್ಲ ಎಂದು ಜೆಡಿಎಸ್(JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ(CM Ibrahim) ಅವರು ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್‌ಬೋರ್ಡ್‌ನಿಂದ(waqf Board) ಕಾಲೇಜು ಮಾಡಬಾರದು ಅಂತೇನಿಲ್ಲ. ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಾಲೇಜು ಮಾಡುವುದು ಸರಿಯಲ್ಲ. ಎಲ್ಲ ಧರ್ಮದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಅಧಿಕಾರವಿದೆ. ಕೇವಲ ಒಂದೇ ಧರ್ಮದ ವಿದ್ಯಾರ್ಥಿಗಳಿಗೆ ಕಾಲೇಜು ಸ್ಥಾಪನೆ ಎಂದರೆ ನಾನೇ ಮೊದಲು ಹೋರಾಟಕ್ಕೆ ಇಳಿಯುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಮುಸ್ಲಿಮರು ಎಲ್ಲ ಹಿಂದೂಗಳನ್ನ ಕೊಲ್ಲಬಹುದಿತ್ತು – ನಿವೃತ್ತ ಜಡ್ಜ್ ವಸಂತ ಮುಳಸಾವಳಗಿ
Advertisement
Advertisement
ನಾನು ಹಿಂದೆ ಮಠದಲ್ಲಿ ಓದಿದ್ದೇನೆ. ಅಲ್ಲಿ ಯಾವುದೇ ರೀತಿಯ ಭೇದ ಬಾವ ಇರಲಿಲ್ಲ. ಆದರೆ ಮುಸ್ಲಿಮರಿಗೆ ಪ್ರತ್ಯೇಕ ಕಾಲೇಜು ವಿಚಾರದ ಮೂಲಕ ಬಿಜೆಪಿಯವರು ವಿನಾಕಾರಣ ವಿವಾದ ಹುಟ್ಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ಬಿಜೆಪಿ(BJP) ಹಾಗೂ ಕಾಂಗ್ರೆಸ್‌ನಲ್ಲಿ(Congress) ಪಳಗಿರುವವರು ರೌಡಿಗಳು ಇದ್ದಾರೆ. ರೌಡಿಗಳನ್ನು ಬಿಜೆಪಿ ಅವರು ವೈಭವೀಕರಣ ಮಾಡುತ್ತಿದ್ದಾರೆ. ಇದು ರಾಜ್ಯದ ದುರ್ದೈವದ ಸಂಗತಿ. ಜನತಾದಳಕ್ಕೂ ರೌಡಿಸಂ ಪದಕ್ಕೆ ಸಂಬಂಧವೇ ಇಲ್ಲ ಎಂದು ಇಬ್ರಾಹಿಂ ಹೇಳಿದರು.
Advertisement
ರೌಡಿಗಳು ರಕ್ಷಣೆಗಾಗಿ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. 40 ರಿಂದ 50 ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಬಳಿಕ ಸೇಫ್ ಆಗಿ ಇರುವುದಕ್ಕೆ ಪ್ರಯತ್ನ ಮಾಡುತ್ತಾರೆ. ರೌಡಿ ಶೀಟ್ ಹಾಕಿರುವ ಪೊಲೀಸರೇ ರೌಡಿಗಳಿಗೆ ಸಲ್ಯೂಟ್ ಹೊಡೆಯುವ ಪರಿಸ್ಥಿತಿ ಉಂಟಾಗುತ್ತದೆ. ಅದು ಹೇಗೆ ಸಾಧ್ಯ? ಅದಕ್ಕೆ ಸಮಾಜ ಅವಕಾಶ ಕೊಡಬಾರದು ಎಂದರು.