ಉಡುಪಿ: ನೈಟ್ ಕರ್ಫ್ಯೂವಿನಿಂದ ಕೊರೊನಾ ನಿಯಂತ್ರಣವಾಗುತ್ತದೆ ಎನ್ನಲು ಸಾಧ್ಯವಿಲ್ಲ. ನ್ಯೂ ಇಯರ್ ಆಚರಣೆ ವೇಳೆ ನಿಯಮ ವಿಧಿಸಲಾಗಿತ್ತು. ಆದರೆ ನೈಟ್ ಕರ್ಫ್ಯೂ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ನೈಟ್ ಕರ್ಫ್ಯೂ ಮಾಡದಿದ್ದರೆ ಜನ ಅನಗತ್ಯವಾಗಿ ಓಡಾಡುತ್ತಿದ್ದರು. ಇದರಿಂದ ಕೊರೊನಾ ಇನ್ನೂ ಇದೆ ಎನ್ನುವುದು ಜನರ ಅರಿವಿಗೆ ಬರುತ್ತದೆ. ಕೊರೊನಾ ಬಗ್ಗೆ ಎಚ್ಚರಿಕೆ ಇರಲಿ ಎಂದು ತಜ್ಞರು ನೈಟ್ ಕರ್ಫ್ಯೂ ವಿಧಿಸಲು ಸಲಹೆ ನೀಡಿದ್ದಾರೆ. ನೈಟ್ ಕರ್ಫ್ಯೂ ವಿಸ್ತರಣೆ ಆಗಬಹುದು ಅನ್ನಿಸುವುದಿಲ್ಲ. ಕೊರೊನಾ ಪೀಡಿತರ ಸಂಖ್ಯೆ ಜಾಸ್ತಿಯಾದರೆ ವಿಸ್ತರಣೆ ಮಾಡಬಹುದು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಮರ್ಯಾದೆಯನ್ನು ಮಣ್ಣುಪಾಲು ಮಾಡುವ ನಾಯಕರನ್ನು ಕಾಂಗ್ರೆಸ್ ಬೆಳೆಸುತ್ತಿದೆ : ಬಿಜೆಪಿ
Advertisement
Advertisement
ಕೊರೊನಾ ಪೀಡಿತರ ಸಂಖ್ಯೆ ಜಾಸ್ತಿಯಾದರೂ ಅದರ ತೀವ್ರತೆ ಇಲ್ಲ. ಎಲ್ಲರಿಗೂ ಆಸ್ಪತ್ರೆ, ಆಕ್ಸಿಜನ್ ಬೇಕಾದರೆ ಸಮಸ್ಯೆಯಾಗುತ್ತದೆ. ಕೇವಲ ಕೊರೊನಾದಿಂದ ಯಾವುದೇ ಅಪಾಯ ಇಲ್ಲ. ಸರ್ಕಾರ ಹಾಗೂ ತಜ್ಞರ ಮೇಲೆ ವಿಶ್ವಾಸ ಇರಿಸಬೇಕು. ಅವರು ನಮ್ಮ ಒಳ್ಳೆಯದಕ್ಕೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು. ಇದನ್ನೂ ಓದಿ: ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ, ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ: ಡಿಕೆಶಿ